BANTWAL
ವಿಟ್ಲ: ಪತ್ತೆಯಾಗಿದ್ದ ತಲೆ ಬುರುಡೆ ರಹಸ್ಯ ಬಯಲು !
ಬಂಟ್ವಾಳ, ಆಗಸ್ಟ್ 09: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ನೆಕ್ಕರೆಕಾಡು ಎಂಬಲ್ಲಿನ ಗುಡ್ಡವೊಂದರಲ್ಲಿ ಪತ್ತೆಯಾದ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.
ಮೃತ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ(65) ಎಂದು ಗುರುತಿಸಲಾಗಿದೆ. ನಾಗೇಶ್ ಗೌಡ ರವರು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ.8ರಂದು ಸಾಯಂಕಾಲ ಗುಡ್ಡಕ್ಕೆ ಸೊಪ್ಪುತರಲೆಂದು ತೆರಳಿದ ಮಂದಿಗೆ ತಲೆಬುರುಡೆ, ಎಲುಬು ಹಾಗೂ ಬಟ್ಟೆ ಕಾಣಸಿಕ್ಕಿದೆ.
ಈ ವಿಚಾರವನ್ನು ವಿಟ್ಲ ಠಾಣಾ ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ನಾಪತ್ತೆ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದ್ದು, ಈ ವೇಳೆ ನಾಪತ್ತೆಯಾದ ನಾಗೇಶ್ ರವರ ಮಗನನ್ನು ಸ್ಥಳಕ್ಕೆ ಕರೆಸಿದ್ದರು.
ವಿಟ್ಲ: ಗುಡ್ಡದಲ್ಲಿ ಮನುಷ್ಯನ ತಲೆ ಬುರುಡೆ, ಎಲುಬು ಪತ್ತೆ: ಗ್ರಾಮಸ್ಥರಲ್ಲಿ ಆತಂಕ
ಈ ವೇಳೆ ಅವರು ನಾಪತ್ತೆಯಾಗುವ ದಿನ ಅವರು ಧರಿಸಿದ್ದ ಬಟ್ಟೆ ತಲೆಬುರುಡೆ ಸಮೀಪ ಪತ್ತೆಯಾಗಿದ್ದು, ಬಟ್ಟೆಯ ಆಧಾರದಲ್ಲಿ ಅದು ನಾಗೇಶ್ ಗೌಡರದ್ದೆ ಎಂದು ಅವರ ಮಗ ಗುರುತು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.