Connect with us

FILM

ನಿರ್ಮಾಪಕನಿಗೆ ನಟ ದರ್ಶನ್ ಜೀವ ಬೆದರಿಕೆ: ಎಫ್‌ಐಆರ್ ದಾಖಲು

ಬೆಂಗಳೂರು, ಆಗಸ್ಟ್ 09 : ಕನ್ನಡದ ಖ್ಯಾತ ನಟ ದರ್ಶನ್ ಸುತ್ತ ಇದೀಗ ಹೊಸ ವಿವಾದ ಕೇಳಿಬಂದಿದ್ದು, ನಿರ್ಮಾಪಕ ಭರತ್‌ ಜೀವ ಬೆದರಿಕೆ ಹಾಕಿದ್ದಾರೆಂದು ಕೆಂಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾವೊಂದನ್ನು ನಿರ್ಮಾಪಕ ಭರತ್ ಕಳೆದ ಎರಡು ವರ್ಷದ ಹಿಂದೆ ಮುಹೂರ್ತ ಮಾಡಿದ್ದರು, ಅನಿವಾರ್ಯ ಕಾರಣಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಾ ಸಾಗಿತ್ತು. ಆ ಸಿನಿಮಾಕ್ಕೆ ಧೃವನ್ (ಸೂರಜ್) ನಾಯಕ ನಟರಾಗಿದ್ದರು.

ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದ್ದಕ್ಕೆ ಚಿತ್ರೀಕರಣ ತಡವಾಗಿದೆ ಎಂದು ನಿರ್ಮಾಪಕ ಭರತ್, ನಟ ಧ್ರುವನ್ ಬಳಿ ತಿಳಿಸಿದಾಗ, ಧ್ರುವನ್, ದರ್ಶನ್ ತೂಗುದೀಪ ಅವರಿಂದ ನಿರ್ಮಾಪಕರಿಗೆ ಕರೆ ಮಾಡಿಸಿದ್ದಾರೆ. ಆ ಸಮಯದಲ್ಲಿ ದರ್ಶನ್, ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನು ದೂರಿನಲ್ಲಿ ವಿಶ್ಲೇಷನೆ ಮಾಡಲಾಗಿದೆ.

ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್, ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಸಿನಿಮಾದ ನಿರ್ದೇಶಕ ಆಂಥೊನಿ ಸಿನಿಮಾದ ಕ್ಯಾಮೆರಾಮನ್ ಅವರುಗಳು ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ಆಡಿಯೋ ಒಂದು ಹರಿದಾಡುತ್ತಿದ್ದು, ‘ನೀನು ಇರಲ್ಲ, ಏನಾದರೂ ಮಾಡುವ ಮುಂಚೆ ಹೇಳಿಯೇ ಮಾಡ್ತೀನಿ ರೆಡಿ ಇರು. ನೀನೆ ಕಾಣಿಸದಂತೆ ಮಾಡಿಬಿಡ್ತೀನಿ ಹುಷಾರಾಗಿರು’ ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಆ ಧ್ವನಿ ದರ್ಶನ್ ಅವರ ಧ್ವನಿ ದರ್ಶನ್ ಅವರದ್ದು ಎನ್ನಲಾಗುತ್ತಿದೆ.

Advertisement
Click to comment

You must be logged in to post a comment Login

Leave a Reply