DAKSHINA KANNADA
Vitla – ಮನೆಯೊಂದರ ಮೇಲೆ ಬಿದ್ದ ಪಿಕಪ್ ವಾಹನ…ಮನೆಯೊಳಗೆ ಸಿಕ್ಕಿಬಿದ್ದ ಮಹಿಳೆ
ವಿಟ್ಲ, ಜುಲೈ 14:ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು, ವಾಹನ ತೆಗೆಯದೇ ಮಹಿಳೆಯ ರಕ್ಷಣೆ ಮಾಡಲು ಸಾಧ್ಯವಾಗದ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ.
ಕೂರೇಲು ಮದ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿರುವ ಮನೆಯ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಬಿದ್ದಿದೆ. ಘಟನೆಯ ವೇಳೆ ಮನೆಯೊಳಗೆ ಮಹಿಳೆ ಮಲಗಿದ್ದರು ಎನ್ನಲಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ ಎಂದು ತಿಳಿದು ಬಂದಿದೆ.
ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
You must be logged in to post a comment Login