DAKSHINA KANNADA
ವಿಷು ಸಂಕ್ರಮಣ ಹಿನ್ನಲೆ ದಕ್ಷಿಣಕನ್ನಡ ಪುಣ್ಯಕ್ಷೇತ್ರಗಳಲ್ಲಿ ಭಕ್ತರ ದಂಡು…

ಪುತ್ತೂರು ಎಪ್ರಿಲ್ 15: ವಿಷು ಸಂಕ್ರಮಣ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಭಕ್ತರ ಸಾಲೇ ಕಂಡು ಬಂದಿದೆ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಸೇರಿದ್ದು, ವಿಷು ಸಂಕ್ರಮಣದ ವಿಶೇಷ ಸೇವೆಯನ್ನು ನೆರವೇರಿಸಿದ್ದಾರೆ.
ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾಯುವ ದೃಶ್ಯ ಕಂಡು ಬಂದಿದೆ. ವಿಷು ಸಂಕ್ರಮಣವನ್ನು ಹೊಸ ವರ್ಷವನ್ನಾಗಿ ಕರಾವಳಿ ಜನ ಆಚರಿಸುತ್ತಿದ್ದು, ಹೊಸ ವರ್ಷಕ್ಕೆ ಪುಣ್ಯಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ.
