Connect with us

    DAKSHINA KANNADA

    ವಿಶ್ವ ಸಂಸ್ಕೃತ ಸಮ್ಮೇಳನ – ಜ್ಞಾನವನ್ನು ಸಂಪಾದಿಸಲು ಸಿಕ್ಕಿರುವ ಒಳ್ಳೆಯ ಅವಕಾಶ

    ಮಂಗಳೂರು: ಜ್ಞಾನ ಎಂಬುದು ಆಹಾರವಿದ್ದಂತೆ. ಜ್ಞಾನವೆಂಬ ಆಹಾರವನ್ನು ಶ್ರೀನಿವಾಸ ವಿಶ್ವ ವಿದ್ಯಾಲಯ ಯಾವ ರೀತಿಯಲ್ಲಿ ಬಂದರೂ ಸ್ವೀಕರಿಸುತ್ತದೆ. ಆದ್ದರಿಂದ ಶ್ರೀನಿವಾಸ ವಿಶ್ವ ವಿದ್ಯಾಲಯ ಒಂದು ಜ್ಞಾನಸಾಗರವಾಗಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್‌ ಹೇಳಿದರು.


    ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿರುವ ‘ವಿಶ್ವ ಸಂಸ್ಕೃತ ಸಮ್ಮೇಳನ’ದ ೨ನೇ ದಿನವಾದ ಫೆಬ್ರವರಿ ೨೫ ರಂದು ವಿಶ್ವ ವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಸಮ್ಮೇಳನದ ಸಾರಾಂಶ ಮತ್ತು ತಜ್ಞರ ಅಧಿವೇಶನದ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಮಾನವೀಯತೆಗೆ ಭಾರತೀಯ ಜ್ಞಾನ ಮತ್ತು ಸಂಸ್ಕೃತದ ಕೊಡುಗೆ ಎಂಬ ವಿಷಯದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಭಾರತ ಸರ್ಕಾರದ ಹಸ್ತಪ್ರತಿಯ ರಾಷ್ಟ್ರೀಯ ಮಿಷನ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ನವದೆಹಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ, ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಿದೆ.


    ಮುಖ್ಯ ಅತಿಥಿ ಲೋಕಸಭಾ ಪ್ರಚಾರ ಪರಿಷತ್‌ನ ಅಂತರಾಷ್ಟ್ರೀಯ ಅಧ್ಯಕ್ಷರಾದ ಪ್ರೊ. ಸದಾನಂದ ದೀಕ್ಷಿತ್‌ ಮಾತನಾಡಿ, ಈ ಸಮ್ಮೇಳನ ಜ್ಞಾನವನ್ನು ಸಂಪಾದಿಸಲು ಸಿಕ್ಕಿರುವ ಒಳ್ಳೆಯ ಅವಕಾಶವಾಗಿದ್ದು, ಈ ಅವಕಾಶವನ್ನು ಒದಗಿಸಿದ ಡಾ. ಸಿಎ. ಎ. ರಾಘವೇಂದ್ರ ರಾವ್‌ ಅಭಿನಂದನಾರ್ಹರು. ಸಮ್ಮೇಳನದ ಪ್ರತಿದಿನ ಹೊಸ ವಿಷಯಗಳನ್ನು ತಿಳಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದ್ದು ಸದುಪಯೋಗಿಸುವಂತೆ ಸಲಹೆ ನೀಡಿದರು. ಭಾರತ್‌ ಇನ್ಫ್ರಾಟೆಕ್‌ನ ನಿರ್ದೇಶಕ ಶ್ರೀ ಮುಸ್ತಫಾ ಎಸ್‌. ಎಂ. ಮಾತನಾಡಿ, ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಣು, ತೃಣ, ಕಾಷ್ಠದಲ್ಲಿ ದೇವರ ವಾಸವಿದೆ. ದೇವರನ್ನು ನೆನಪಿಸುವಾಗ ಮಾನವರು ಆ ಭಾವವನ್ನು ಅನುಭವಿಸಬೇಕು ಎನ್ನುತ್ತ, ಆಯುರ್ವೇದ, ಯೋಗ ಮತ್ತು ಸಂಸ್ಕೃತದ ಸಂಬಂಧವನ್ನು ಸುಂದರವಾಗಿ ವಿವರಿಸಿದರು.

    ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಸ್ಪಿರಿಚ್ಯುವಲ್‌ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ವಿಘ್ನೇಶ್ವರ ಭಟ್‌ ಮಾತನಾಡಿ, ದೇಹ, ಮನಸ್ಸು ಹಾಗೂ ಉಸಿರಿಗೆ ಅವಿನಾಭಾವ ಸಂಬಂಧವಿದೆ. ಮಂತ್ರ ಉಚ್ಛಾರಣೆಯಿಂದ ಮನಸ್ಸು ಕೇಂದ್ರೀಕೃತವಾಗುತ್ತದೆ. ಜ್ಞಾನದ ಬಾಗಿಲು ತೆರೆಯಲು ಸಂಸ್ಕೃತ ಭಾಷೆಯು ರಹದಾರಿಯಾಗಿದೆ ಎಂದರು.

     

    Share Information
    Advertisement
    Click to comment

    You must be logged in to post a comment Login

    Leave a Reply