LATEST NEWS
ವಿಶಾಲ ಗಾಣಿಗ ಮರ್ಡರ್ ಕೇಸ್: ಮತ್ತೋರ್ವ ಸುಪಾರಿ ಕಿಲ್ಲರ್ ನ ಸುಳಿವು ಪತ್ತೆ!

ಉಡುಪಿ ಜುಲೈ 23: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದ ಮತ್ತೋರ್ವ ಸುಫಾರಿ ಹಂತಕನ ಸುಳಿವು ಉಡುಪಿ ಪೊಲೀಸರಿಗೆ ದೊರೆತಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಸ್ವತಃ ಪತಿಯೇ ಸುಫಾರಿ ಕೊಟ್ಟು ಪತ್ನಿ ವಿಶಾಲ ಗಾಣಿಗರನ್ನು ಕೊಲೆ ಮಾಡಿದ್ದರು, ಕೊಲೆಗೆ ಭಾರಿ ಮಾಸ್ಟರ್ ಪ್ಲ್ಯಾನ್ ಬಳಸಿದ ಪ್ರಮುಖ ಆರೋಪಿ ಪತಿ ರಾಮಕೃಷ್ಣ, ಬಾಡಿಗೆ ಸುಫಾರಿ ಕಿಲ್ಲರ್ ಗಳ ಮೂಲಕ ವಿಶಾಲ ಗಾಣಿಗರನ್ನು ಬ್ರಹ್ಮಾವರ ಕುಮ್ರಗೋಡಿನ ಅಪಾರ್ಟ್ ಮಂಟ್ ನಲ್ಲಿ ಕೊಲೆ ಮಾಡಿಸಿದ್ದ, ನಂತರ ನಾಟಕವಾಡಿದ್ದ ಪತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿತ್ತು. ಬಳಿಕ ಆರೋಪಿ ರಾಮಕೃಷ್ಣನ ಮಾಹಿತಿ ಪ್ರಕಾರ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಒಬ್ಬ ಸುಪಾರಿ ಹಂತಕನನ್ನು ಜುಲೈ 19 ರಂದು ಬಂಧಿಸಿದ್ದರು.

ಇದೀಗ ಉತ್ತರ ಪ್ರದೇಶದ ಪೊಲೀಸರ ಸಹಕಾರದೊಂದಿಗೆ ಎರಡನೇ ಸುಪಾರಿ ಹಂತಕನ ಬಂಧನಕ್ಕೆ ಬಲೆ ಬೀಸಿದ್ದು,ಇನ್ನೆರಡು ದಿನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.