LATEST NEWS
ಖ್ಯಾತ ಗಾಯಕ ಹರಿಹರನ್ ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ
ಖ್ಯಾತ ಗಾಯಕ ಹರಿಹರನ್ ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ
ಮೂಡಬಿದಿರೆ ಡಿಸೆಂಬರ್ 14: ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನದಿಂದ ನೀಡುವ ಆಳ್ವಾಸ್ ವಿರಾಸತ್-2019 ಪ್ರಶಸ್ತಿಗೆ ಖ್ಯಾತ ಹಿನ್ನಲೆ ಗಾಯಕ ಪದ್ಮಶ್ರೀ ಹರಿಹರನ್ ಆಯ್ಕೆಯಾಗಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನದ ಪ್ರತಿವರ್ಷ ನಡೆಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಈ ಬಾರಿ 25 ನೇ ವರ್ಷವನ್ನು ಆಚರಿಸುತ್ತಿದ್ದು, ಈ ಬಾರಿ ಜನವರಿ 4 ರಿಂದ 6 ರವರೆಗೆ ನಡೆಯಲಿದೆ. ಈ ಬಾರಿ ಆಳ್ವಾಸ್ ವಿರಾಸತ್ -2019 ಪ್ರಶಸ್ತಿಯನ್ನು ಖ್ಯಾತ ಹಿನ್ನಲೆ ಗಾಯಕ ಪದ್ಮಶ್ರೀ ಹರಿಹರನ್ ಆಯ್ಕೆಯಾಗಿದ್ದಾರೆ.
ಮೂರು ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವ ಜರುಗಲಿದೆ. ಎಂದಿನಂತೆ ಪ್ರತೀದಿನ ಪೂರ್ವಾರ್ಧದಲ್ಲಿ ಸಂಗೀತ, ಉತ್ತಾರಾರ್ಧದಲ್ಲಿ ನೃತ್ಯವು ಸಂಸ್ಕೃತಿ ಪ್ರಿಯರ ಮನಸ್ಸನ್ನು ಸೂರೆಗೊಳ್ಳಲಿದೆ. ಪ್ರತಿದಿನ ಮುಸ್ಸಂಜೆ 6 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮಗಳು ರಾತ್ರಿ 10.30ಕ್ಕೆ ಮುಕ್ತಾಯಗೊಳ್ಳುತ್ತವೆ.
ಜನವರಿ 4ರಂದು ಸಂಜೆ ಆಳ್ವಾಸ್ ವಿರಾಸತ್ 2019 ಉದ್ಘಾಟನೆ ನಡೆಯಲಿದ್ದು, ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ನಡೆಯಲಿದೆ. ಬೃಹತ್ ವೇದಿಕೆ ಇದಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುವಾಗುವಂತಹ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.