KARNATAKA
ಗೆಳೆಯ ನೀರಿನಲ್ಲಿ ಮುಳುಗಿ ಸಾಯುತ್ತಿದ್ದರೂ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಕುಳಿತ ಸ್ನೇಹಿತರು

ಕಲಬುರಗಿ ಮೇ 24: ಕಂಠಪೂರ್ತಿ ಕುಡಿದು ತೇಲಾಡುತ್ತಿದ್ದ ಸ್ನೇಹಿತರು ಗೆಳೆಯ ನೀರಿನಲ್ಲಿ ಮುಳುಗಿ ಸಾವನಪ್ಪುತ್ತಿದ್ದರು ವಿಡಿಯೋ ಮಾಡಿರುವ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್ ಮೂಲದ ಸಾಜೀದ್ (25) ಸ್ನೇಹಿತರ ಜೊತೆ ಚೇಂಗಟಾದ ದರ್ಗಾಕ್ಕೆ ಹೋಗಿದ್ದರು. ದರ್ಗಾ ದರ್ಶನ ಬಳಿಕ ಸಾಜೀದ್ ಮದ್ಯ ಸೇವಿಸಿದ್ದನು. ಬಳಿಕ ನಾಲ್ವರು ಸ್ನೇಹಿತರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಈಜಲು ನೀರಿಗೆ ಹಾರಿದ್ದಾರೆ. ನಶೆಯಲ್ಲಿದ್ದ ಸಾಜೀದ್ ಕೂಡ ನೀರಿಗೆ ಹಾರಿದ್ದಾನೆ. ಆದರೆ ಸಾಜೀದ್ಗೆ ಈಜಲು ಆಗಲಿಲ್ಲ. ಇದರಿಂದ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾನೆ. ಸಾಜೀದ್ ನೀರಿನಲ್ಲಿ ಮುಳುಗಿ ಸಾವು-ಬದುಕಿನ ಮಧ್ಯೆ ಹೋರಾಡಲು ಆರಂಭಿಸಿದ್ದಾನೆ. ಸಾಜೀದ್ ಮುಳುಗಿ ಸಾಯುವದನ್ನು ಕಂಡರೂ ಸ್ನೇಹಿತರು ಸಹಾಯಕ್ಕೆ ಹೋಗಿಲ್ಲ. ಅಲ್ಲದೆ ಸ್ನೇಹಿತರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
