Connect with us

DAKSHINA KANNADA

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ – ಕಾಂಗ್ರೇಸ್ ಕಾರ್ಯಕರ್ತನ ವಿಡಿಯೋ ವೈರಲ್

ಪುತ್ತೂರು ಮೇ 24: ಮಾಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೇಸ್ ಕಾರ್ಯಕರ್ತ ಎಂದು ಹೇಳಲಾದ ವ್ಯಕ್ತಿಯೊಬ್ಬ ತನ್ನ ಗೆಳೆಯನ ಜೊತೆ ನಡೆಸುತ್ತಿದ್ದ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹಲ್ಲೆ ಮಾಡಿದವರು ಮಾಣಿ ನಾಗು ಸಹೋದರ ರಾಕು ಮತ್ತು ತಂಡ ಎಂದು ಪೋನ್ ನಲ್ಲಿ ಹೇಳಿರುವುದು ದಾಖಲಾಗಿದೆ.


ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಘಟನೆ ಬಂಟ್ವಾಳದ ಮಾಣಿ ಎಂಬಲ್ಲಿ ನಡೆದಿತ್ತು. ಮಾಣಿ ಜಂಕ್ಸನ್ ನಲ್ಲಿ ಆಕ್ಟೀವ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಒಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಳಿಕ ಕಾರಿನಿಂದ ಇಳಿದ ತಂಡ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದೆ ಎಂದು ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಲಾಗಿತ್ತು,

ಇದೀಗ ಕಾಂಗ್ರೇಸ್ ಕಾರ್ಯಕರ್ತನೊಬ್ಬ ತನ್ನ ಗೆಳೆಯನ ಜೊತೆ ಪೋನ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಆತ ನನಗೆ ಗಲಾಟೆ ವಿಷಯವೇ ಗೊತ್ತಿಲ್ಲ , ಬ್ಯಾಂಕ್ ಗೆ ಹಣ ಡೆಪಾಸಿಟ್ ಮಾಡಲು ಬಂದಿದ್ದೆ. ಆ ಸಂದರ್ಭದಲ್ಲಿ ಹಲ್ಲೆಗೊಳಗಾದ ಯುವಕರ ತಂಡದವರು ಎದುರುಗಡೆಯಿಂದ ಬರುತ್ತಿದ್ದರು, ಈ ವೇಳೆ ಅವರಿಂದ ತಪ್ಪಿಸಿಕೊಂಡೆ, ಆದರೆ ಬಿಜೆಪಿಯವರು ಹೆಸರನ್ನ ಪೊಲೀಸ್ ಅವ್ರಲ್ಲಿ ಹೇಳಿದ್ದಾರೆ. ಆ ಕಾರಣಕ್ಕಾಗಿ ನನ್ನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಆಗುವಂತೆ ಅಣ್ಣ ಹೇಳಿದ್ರು, ಆದ್ರೆ ಈ ಗಲಭೆಯಲ್ಲಿ ನನ್ನ ಪಾಲ್ಗೊಳ್ಳುವಿಕೆ ಇಲ್ಲ. ಹಲ್ಲೆ ಮಾಡಿದವರು ಮಾಣಿ ನಾಗು ಸಹೋದರ ರಾಕು ಮತ್ತು ತಂಡ ಎಂದು ಗೆಳಯನ ಜೊತೆ ಫೋನ್‌ನಲ್ಲಿ ಕಾಂಗ್ರೇಸ್ ಕಾರ್ಯಕರ್ತ ಸತ್ಯ ಒಪ್ಪಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

Advertisement
Click to comment

You must be logged in to post a comment Login

Leave a Reply