LATEST NEWS
ಮಂಗಳೂರು ನಗರ ನೂತನ ಪೊಲೀಸ್ ಅಯುಕ್ತರಾಗಿ ವಿಪುಲ್ ಕುಮಾರ್ ಅಧಿಕಾರ ಸ್ವೀಕಾರ

ಮಂಗಳೂರು ನಗರ ನೂತನ ಪೊಲೀಸ್ ಅಯುಕ್ತರಾಗಿ ವಿಪುಲ್ ಕುಮಾರ್ ಅಧಿಕಾರ ಸ್ವೀಕಾರ
ಮಂಗಳೂರು, ಎಪ್ರಿಲ್ 18: ಮಂಗಳೂರು ನಗರ ನೂತನ ಪೊಲೀಸ್ ಅಯುಕ್ತರಾಗಿ ವಿಪುಲ್ ಕುಮಾರ್ ಇಂದು ಸಂಜೆ ಅಧಿಕಾರ ಸ್ವೀಕಾರ ಮಾಡಿಕೊಂಡರು.
ಇಂದು ಸಂಜೆ 7. 30 ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಅವರು ನೇರವಾಗಿ ಪೋಲಿಸ್ ಆಯುಕ್ತ ಕಚೇರಿಗೆ ಬಂದು ನಿರ್ಗಮಿತ ಆಯುಕ್ತರಾ ಟಿ. ಆರ್ . ಸುರೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರದೇಶ ಚಿರಪರಿಚಿತವಾಗಿದೆ.

ಕಾನೂನು ಸುವ್ಯವಸ್ಥೆಗೆ ನನ್ನ ಮೊದಲ ಆದ್ಯತೆ. ಚುನಾವಣೆ ಹತ್ತಿರ ಬರುತ್ತಿದೆ ಆದ್ದರಿಂದ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ನನ್ನ ಮೊದಲ ಆದ್ಯತೆ.
ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಡಿಸಿಪಿಗಳಾದ ಹನುಮಂತ ರಾಯ,ಉಮಾ ಪ್ರಶಾಂತ್, ಹಿರಿಯ ಪೋಲಿಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.