FILM
ಮಚ್ಚು ಹಿಡಿದ ವಿನಯ್ ಗೌಡ, ರಜತ್ ಕಿಶನ್ ಗೆ 3 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು, ಮಾರ್ಚ್ 26: ನಿಷೇಧಿತ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ತಪ್ಪಿಗಾಗಿ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ರಿಯಲ್ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪ ಅವರ ಮೇಲಿದೆ. ಆದರೆ ಆ ಮಚ್ಚು ಎಲ್ಲಿದೆ ಎಂಬುದನ್ನು ಅವರಿಬ್ಬರು ಇನ್ನೂ ಪೊಲೀಸರಿಗೆ ತಿಳಿಸಿಲ್ಲ.
ಈ ಹಿನ್ನೆಲೆಯಲ್ಲಿ ಅವರನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹರೀಶ್ ಚಂದ್ರಗೌಡ ವಾದ ಮಾಡಿದರು. ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ವಿನಯ್ ಗೌಡ ಮತ್ತು ರಜತ್ ಕಿಶನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

‘ರಾತ್ರಿ ತಂದು ಫೈಬರ್ ಲಾಂಗ್ ನೀಡಿದಾಗ ನೋಟಿಸ್ ನೀಡಿ ಕಳಿಸಿದ್ದೆವು. ಬೆಳಗ್ಗೆ ಇವರು ಹಾಜರುಪಡಿಸಿದ್ದು ಬೇರೆ ಲಾಂಗ್ ಎಂದು ದೃಢಪಟ್ಟಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಫೈಬರ್ ಲಾಂಗ್ ನೀಡಿದ್ದಾರೆ. ಅಸಲಿ ಮಚ್ಚನ್ನು ಸೀಜ್ ಮಾಡಬೇಕಿದೆ. ಜಪ್ತಿ ಮಾಡದೆ ತನಿಖೆ ಸಾಧ್ಯವಿಲ್ಲ. ಸೀಜ್ ಮಾಡಿ ಮಹಜರು ಮಾಡದಿದ್ದರೆ ತನಿಖೆ ಅಪೂರ್ಣವಾಗುತ್ತೆ. ಬೆಳಗ್ಗೆ 10.29ಕ್ಕೆ ವಿಚಾರಣೆಗೆ ಕರೆದರೆ ಮಧ್ಯಾಹ್ನ 2.29ಕ್ಕೆ ಬರುತ್ತಾರೆ. ಹಾಗಾಗಿ ಪೊಲೀಸ್ ಕಸ್ಟಡಿಗೆ ಇವರನ್ನು ನೀಡಬೇಕು’ ಎಂದು ಪೊಲೀಸರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಹರೀಶ್ ಚಂದ್ರಗೌಡ ವಾದಿಸಿದ್ದಾರೆ.ಬೊಗಳುವ ಪ್ರತಿ ನಾಯಿಗೂ ಕಲ್ಲು ಎಸಿತಾ ಕೂತ್ರೆ ನಾವು ಮುಂದೆ ಹೋಗ್ಲಿಕ್ಕೆ ಆಗತ್ತಾ ?: ಚೈತ್ರ ಕುಂದಾಪುರ
‘ರಜತ್ ಮತ್ತು ವಿನಯ್ ಭಯ ಉಂಟುಮಾಡುವ ರೀತಿಯಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ’ ಎಂದು ಪೊಲೀಸರ ಪರ ಲಾಯರ್ ವಾದಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಮೂಲಕ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ಫೇಮಸ್ ಆಗಿದ್ದರು. ಈಗ ರೀಲ್ಸ್ ಮಾಡಿ ಅವರು ಸಂಕಷ್ಟ ಎದುರಿಸುವಂತಾಗಿದೆ.
ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸಲು ಕೂಡ ರಜತ್ ಹಾಗೂ ವಿನಯ್ ಪ್ರಯತ್ನಿಸಿದ್ದಾರೆ ಎಂಬ ಆರೋಪ ಇದೆ. ಮೊದಲು ವಿಚಾರಣೆ ಮಾಡಿದಾಗ ಆರೋಪಿಗಳು ಫೈಬರ್ ಮಚ್ಚು ನೀಡಿದ್ದರು. ಪರಿಶೀಲನೆ ನಡೆಸಿದಾಗ ರೀಲ್ಸ್ನಲ್ಲಿ ಬಳಸಿದ ಮಚ್ಚು ಅದಲ್ಲ ಎಂಬುದು ಪತ್ತೆ ಆಯಿತು. ಹಾಗಾಗಿ ಅವರನ್ನು ಮತ್ತೆ ಕರೆದು ವಿಚಾರಣೆ ಮಾಡಲಾಯಿತು. ಮಹಜರು ವೇಳೆ ಕೂಡ ಆರೋಪಿಗಳು ರಿಯಲ್ ಮಚ್ಚು ಎಲ್ಲಿದೆ ಎಂಬುದನ್ನು ತೋರಿಸಿಲ್ಲ. ಹಾಗಾಗಿ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ ಆರೋಪ ಸಹ ಎದುರಾಗಿದೆ.
1 Comment