LATEST NEWS
ಕ್ರೈಸ್ತ ಪಾದ್ರಿ ಅಂತ್ಯಕ್ರಿಯೆ ಅನುಮತಿ ಕೋರಿ ಸುಪ್ರೀಂ ಕೋರ್ಟ್ ಗೆ ಬರಬೇಕಾದ ಸ್ಥಿತಿ – ಇದು ನೋವಿನ ಸಂಗತಿ ಎಂದ ನ್ಯಾಯಮೂರ್ತಿಗಳು

ಹೊಸದಿಲ್ಲಿ ಜನವರಿ 23: ಕ್ರೈಸ್ತ ಪಾದ್ರಿಯೊಬ್ಬರ ತಮ್ಮ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಪ್ರಕರಣ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣ ಸುಪ್ರೀಂಕೋರ್ಟ್ ವರೆಗೂ ಬಂದಿದ್ದಕ್ಕೆ ನ್ಯಾಯಮೂರ್ತಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅರ್ಜಿಯ ಪ್ರಕಾರ, ಅರ್ಜಿದಾರರು ಬುಡಕಟ್ಟು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ತಂದೆ ವೃದ್ಧಾಪ್ಯ ಮತ್ತು ದೀರ್ಘಕಾಲದ ಅನಾರೋಗ್ಯದ ಕಾಯಿಲೆಯಿಂದ ಜನವರಿ 7ರಂದು ನಿಧನರಾಗಿದ್ದರು. ಅವರ ಕುಟುಂಬವು ಗ್ರಾಮದ ಸ್ಮಶಾನದಲ್ಲಿ ಕ್ರಿಶ್ಚಿಯನ್ನರಿಗೆ ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿ ಅವರ ಪಾರ್ಥಿವ ಶರೀರವನ್ನು ಹೂಳಲು ಬಯಸಿದ್ದರು. ಆದರೆ ಕೆಲವು ಗ್ರಾಮಸ್ಥರು ಇದಕ್ಕೆ ವಿರೋಧಿಸಿದ್ದು, ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನಡೆಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಗ್ರಾಮಸ್ಥರು ಹಿಂಸಾಚಾರಕ್ಕೆ ಮುಂದಾದಾಗ ಅರ್ಜಿದಾರರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಮೃತದೇಹವನ್ನು ಗ್ರಾಮದಿಂದ ಹೊರಕ್ಕೆ ಕೊಂಡೊಯ್ಯುವಂತೆ ಅವರ ಮೇಲೆ ಒತ್ತಡ ಹೇರಿದರು. ಇದರ ಪರಿಣಾಮವಾಗಿ ಜನವರಿ 7ರಿಂದ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ.

‘ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಪ್ರಕಾರ ತಂದೆಯ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ಕೋರಿ ಅವರ ಮಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ತಂದೆ ಅಂತ್ಯಸಂಸ್ಕಾರಕ್ಕಾಗಿ ಕೋರ್ಟ್ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಬಂದಿದೆ. ಇದು ಅತ್ಯಂತ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದೆ ಛತ್ತೀಸ್ ಗಢದ ಸ್ಥಳೀಯ ಗ್ರಾಮದಲ್ಲಿ ತಂದೆಯ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗದ ಕ್ರಿಶ್ಚಿಯನ್ ವ್ಯಕ್ತಿಯ ಮನವಿಗೆ ಸಂಬಂಧಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ , ಈ ಬೆಳವಣಿಗೆಯಿಂದ ನಮಗೆ ನೋವಾಗಿದೆ ಎಂದು ಹೇಳಿದೆ. ಮನವಿಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಸುಪ್ರೀಂ ಕೋರ್ಟ್ ಬುಧವಾರ ಒಲವು ತೋರಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಹಿಂದೂ ಆದಿವಾಸಿಗಳ ಹಠಾತ್ ಆಕ್ಷೇಪದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿತು, ವರ್ಷಗಳ ಕಾಲ ಎರಡೂ ಸಮುದಾಯಗಳ ವ್ಯಕ್ತಿಗಳನ್ನು ಒಟ್ಟಿಗೆ ಹೂಳಲು ಯಾರೂ ಆಕ್ಷೇಪಣೆಗಳನ್ನು ಎತ್ತಲಿಲ್ಲ. “ಈ ಘಟನೆಯವರೆಗೂ ವಿರೋಧವಿರಲಿಲ್ಲ.. ಏಕೆ ಇದ್ದಕ್ಕಿದ್ದಂತೆ?” ಛತ್ತೀಸ್‌ಗಢ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ ರಮೇಶ್ ಬಾಘೇಲ್ ಅವರ ಅರ್ಜಿಯನ್ನು ಆಲಿಸಿದ ಪೀಠವು, ತನ್ನ ಗ್ರಾಮದ ಸ್ಮಶಾನದಲ್ಲಿ ಕ್ರಿಶ್ಚಿಯನ್ ಸಮಾಧಿಗಾಗಿ ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಕೋರಿದ ತನ್ನ ಮನವಿಯನ್ನು ವಿಲೇವಾರಿ ಮಾಡಿತು.