FILM
ಸೀರೆ ಬಿಟ್ಟು ನ್ಯೂಸ್ ಪೇಪರ್ ನಲ್ಲಿ ಮೈಮುಚ್ಚಿಕೊಂಡ ನಟಿ ವಿದ್ಯಾಬಾಲನ್…ಪೋಟೋ ವೈರಲ್

ಮುಂಬೈ ಮಾರ್ಚ್ 07: ಸದಾ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಬಾಲಿವುಡ್ ನಟಿ ಇದೀಗ ಪೋಟೋಶೂಟ್ ಗೆ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನ್ಯೂಸ್ ಪೇಪರ್ ನಲ್ಲಿ ತನ್ನ ಮೈಮುಚ್ಚಿಕೊಂಡಿರುವ ಪೋಟೋ ಇದೀಗ ವೈರಲ್ ಆಗಿದೆ.
ವಿದ್ಯಾಬಾಲನ್ ಅಂದರೆ ಕಣ್ಣೆದುರು ಬರುವುದು ಸೀರೆ ಸುಂದರಿ ಯಾವಾಗಲೂ ಸೀರೆಯಲ್ಲಿ ಕಂಗೊಳಿಸುತ್ತಾರೆ. ಸೀರೆಗಳ ಬಗ್ಗೆ ಅವರಿಗೆ ಬಹಳ ಪ್ರೀತಿ. ಅನೇಕ ವಿಶೇಷ ಸಂದರ್ಭದಲ್ಲಿ ಅವರು ಸೀರೆ ಧರಿಸಿ ಮಿಂಚುತ್ತಾರೆ.

ಪ್ರತಿ ವರ್ಷ ಡಬೂ ರತ್ನಾನಿ ಅವರು ಬಾಲಿವುಡ್ ಸೆಲೆಬ್ರಿಟಿಗಳ ಫೋಟೋಶೂಟ್ ಮಾಡುತ್ತಾರೆ. ಬಹುತೇಕ ಸೆಲೆಬ್ರಿಟಿಗಳು ಬೋಲ್ಡ್ ಆಗಿಯೇ ಪೋಸ್ ನೀಡುತ್ತಾರೆ. ಈ ಬಾರಿ ವಿದ್ಯಾ ಬಾಲನ್ ಅವರು ತುಂಬ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ‘ಡರ್ಟಿ ಪಿಕ್ಚರ್’ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಆ ಸಿನಿಮಾವನ್ನು ಬಹುತೇಕರು ನೆನಪು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾ ಬಾಲನ್ ಅವರ ಈ ಫೋಟೋ (Vidya Balan Viral Photo) ವೈರಲ್ ಆಗಿದೆ. ಇದನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.