Connect with us

    BANTWAL

    ಸೇತುವೆಯ ದುರವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿಡಿಯೋ ಈಗ ವೈರಲ್

    ಸೇತುವೆಯ ದುರವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿಡಿಯೋ ಈಗ ವೈರಲ್

    ಮಂಗಳೂರು ಜೂನ್ 26:ಬಂಟ್ವಾಳದ ಮೂಲರಪಟ್ನ ಬಳಿ ನಿನ್ನೆ ಕುಸಿದ ಸೇತುವೆಯ ಬಗ್ಗೆ 3 ತಿಂಗಳ ಹಿಂದೆ ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದ ವಿಡಿಯೋ ಈಗ ವೈರಲ್ ಆಗಿದೆ. ಮೂಲರಪಟ್ನ ನಿವಾಸಿ ಹಮೀದ್ ಎಂಬುವವರು ಮೂರು ತಿಂಗಳ ಹಿಂದೆ ಈ ಸೇತುವೆ ಕುಸಿದು ಬೀಳುವ ಎಚ್ಚರಿಕೆ ನೀಡಿದ್ದರು. ಈ ಕರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಈಗ ಆ ವಿಡಿಯೋ ಸಖತ್ ವೈರಲ್ ಆಗಿದೆ.

    3 ತಿಂಗಳ ಹಿಂದೆ ಹಮೀದ್ ಈ ಸೇತುವೆ ಮೇಲೆ ನಿಂತು ಬ್ಯಾರಿ ಭಾಷೆಯಲ್ಲಿ ಸೇತುವೆ ಕುಸಿಯುವ ಆತಂಕ ವ್ಯಕ್ತಪಡಿಸಿದ್ದರು. ಅದು ಒಂದಲ್ಲ, ಎರಡಲ್ಲ. ಈ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ನನಗೇನು ಈ ಕುರಿತು ಹೇಳಬೇಕಾಗಿಲ್ಲ. ಈ ಸೇತುವೆ ನಮ್ಮಪ್ಪಗೂ ಬೇಡ, ನನಗೂ ಬೇಡ..ಸೇತುವೆ ಅಂದರೇನು ಗೊತ್ತಾ..? ನೀವು ಎದುರು ಬನ್ನಿ. ಹೆದರಬೇಡಿ. ನೀವು ದಿನಾಲೂ ಕಾರಿನಲ್ಲಿ ಓಡಾಡುತ್ತೀರಾ. ಈ ಸೇತುವೆಯಲ್ಲಿ ಬಿರುಕು ಬಿಟ್ಟಿದ ವಿಚಾರ ನನಗೆ ಯಾವಾಗಲೋ ಗೊತ್ತಾಗಿದೆ. ನನ್ನ ಮನೆ ಇಲ್ಲಿಲ್ಲ. ನೀವೇ ಇಲ್ಲಿ ಓಡಾಡೋದು.
    ಒಂದು ವೇಳೆ ಸೇತುವೆ ಕುಸಿದರೆ ನೀವು ದೋಣಿಯಲ್ಲಿ ಹೋಗಬೇಕಾದ ಪರಿಸ್ಥಿತಿ ಬರಬಹುದು. ಮರಳು ತೆಗೆಯುವವರು ಇಲ್ಲಿಗೆ ಬರುತ್ತಾರೆ. ನೀವು ಈ ಬಗ್ಗೆ ಮಾತಾಡಿ. ನಾನು ಮಾತಾಡುತ್ತೇನೆ. ನೀವು ಮಾತಾಡಿ. ನಾನೇನು ಹೆದರಲ್ಲ.ಎಂದು ಸೇತುವೆ ಮೇಲೆ ನಿಂತು ಬ್ಯಾರಿ ಭಾಷೆಯಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು.

    ಬಂಟ್ವಾಳ ಮತ್ತು ಮಂಗಳೂರು ಗಡಿ ಭಾಗ ದಲ್ಲಿರುವ ಈ ಸೇತುವೆ ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಾಹನಗಳು ಬಂಟ್ವಾಳ , ಸಿದ್ದಕಟ್ಟೆ, ಸಂಗಬೆಟ್ಟು, ಪುಚ್ಚಮುಗರು,ಮಾರ್ಗ ಮೂಲಕ ಮೂಡಬಿದ್ರೆಯಿಂದ ಸಂಚರಿಸುತ್ತಿವೆ. ಮೂಲರಪಟ್ನ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಸ್ಥಳಿಯ ಜನರು ಪಕ್ಕದಲ್ಲಿಯೇ ಇರುವ ತೂಗುಸೇತುವೆಯ ಮೂಲಕ ತೆರಳುತ್ತಿದ್ದಾರೆ.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *