Connect with us

    LATEST NEWS

    ಮಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಸ್ಕಾರ್ಫ್ ವಿವಾದ

    ಮಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಸ್ಕಾರ್ಫ್ ವಿವಾದ

    ಮಂಗಳೂರು ಜೂನ್ 25: ಮಂಗಳೂರಿನಲ್ಲಿ ಮತ್ತೆ ಸ್ಕಾರ್ಫ್ ವಿವಾದ ತಲೆ ಎತ್ತಿದ್ದು , ಮಂಗಳೂರು ನಗರದ ಸಂತ ಅಗ್ನೇಸ್ ಕಾಲೇಜಿನಲ್ಲಿ ಈ ಬಾರಿ ಸ್ಕಾರ್ಫ್ ವಿವಾದ ಉಂಟಾಗಿದೆ.

    ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕೆಂದು ವಿಧ್ಯಾರ್ಥಿನಿಯರು ಸಿಎಫ್ಐ ನೇತೃತ್ವದಲ್ಲಿ ಇಂದು ಸಂತ ಅಗ್ನೇಸ್ ಕಾಲೇಜಿನ ಎದುರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ಶೈಕ್ಷಣಿಕ ವರ್ಷದ ಆರಂಭದಲ್ಲೇ ನಮ್ಮನ್ನು ಸ್ಕಾರ್ಫ್ ಧರಿಸದಂತೆ ಎಚ್ಚರಿಕೆ ನೀಡಿದ್ದರೂ ಅಲ್ಲದೆ ಶಿಕ್ಷಣ ಸಂಸ್ಥೆಯ ನಿಯಮಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ವಿಧ್ಯಾರ್ಥಿನಿಯರು ಆರೋಪಿಸಿದ್ದಾರೆ. ಅಲ್ಲದೆ ಸ್ಕಾರ್ಫ್ ಧರಿಸಿ ಕಾಲೇಜಿಗೆ ಬಂದರೆ ದಂಢ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ ಎಂದು ಪ್ರತಿಭಟನಾ ನಿರತ ವಿಧ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ ಅಗ್ನೇಸ್ ಕಾಲೇಜಿನ ಪ್ರಾಂಶುಪಾಲರಾದ ಜೆಸ್ವಿನಾ ನಮ್ಮ ಸಂಸ್ಥೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿ ಕಲಿಯುವ ಪ್ರತಿಯೊಬ್ಬ ವಿಧ್ಯಾರ್ಥಿಯನ್ನೂ ನಾವು ಗೌರವಿಸುತ್ತೇವೆ. ವಿಧ್ಯಾರ್ಥಿಗಳು ಯಾವುದೇ ಸಮಸ್ಯೆಯಿದ್ದರೂ ವಿಧ್ಯಾರ್ಥಿಗಳ ಪೋಷಕರೊಂದಿಗೆ ಹಾಗೂ ವಿಧ್ಯಾರ್ಥಿಗಳೊಂದಿಗೆ ಚರ್ಚಿಸಿ ಪರಿಹರಿಸುತ್ತೆವೆ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply