Connect with us

    LATEST NEWS

    ಹಿಜಾಬ್ ನಿಷೇಧ ರದ್ದುಗೊಳಿಸಿದರೆ ಶಾಲಾ ಕಾಲೇಜುಗಳು ಕೇಸರಿಮಯವಾಗಲಿದೆ – ವಿಶ್ವ ಹಿಂದೂ ಪರಿಷತ್

    ಮಂಗಳೂರು ಡಿಸೆಂಬರ್ 23: ಶಾಲಾ ಕಾಲೇಜುಗಳಲ್ಲಿನ ಹಿಜಾಬ್ ನಿಷೇಧ ವಾಪಾಸ್ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ವಿಶ್ವ ಹಿಂದೂಪರಿಷತ್ ಗರಂ ಆಗಿದೆ.

    ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಹಿಜಾಬ್ ನಂತಹ ವಿಷಯಗಳನ್ನು ತಂದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತಾಂಧತೆಯ ವಿಷ ಬೀಜವನ್ನು ಬಿತ್ತಬೇಡಿ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ . ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರೀಯಿಸಿರುವ ಶರಣ್ ಪಂಪ್‌ವೆಲ್ ವಿದ್ಯಾರ್ಥಿ ಶೆಕ್ಷಣಿಕ ಜೀವನದ ಮಹತ್ವಗ ಘಟ್ಟವಾದ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದೆ.

    ಈ ಸಂದರ್ಭದಲ್ಲಿ ಹಿಜಾಬ್ ನಂತಹ ವಿಷಯಗಳನ್ನು ಮುನ್ನಲೆಗೆ ತಂದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತಾಂಧತೆಯ ವಿಷ ಬೀಜವನ್ನು ಬಿತ್ತಬೇಡಿ ಎಂದು ಸರ್ಕಾರವನ್ನು ಆಗ್ರಹಿಸಿದ ಅವರು ಒಂದು ವೇಳೆ ಹಿಜಾಬ್ ನಿಷೇಧವನ್ನು ರದ್ಧುಗೊಳಿಸಿದರೆ ಕರ್ನಾಟಕದ ಶಾಲಾ ಕಾಲೇಜುಗಳು ಕೇಸರಿಮಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *