LATEST NEWS
ನೇಹಾ ಹಿರೇಮಠ್ ಹತ್ಯೆ ಪ್ರಕರಣ ಎನ್ಐಎ ತನಿಖೆಗೆ ನೀಡಿ – ವಿಎಚ್ ಪಿ

ಮಂಗಳೂರು ಎಪ್ರಿಲ್ 20:ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಬೇಕೆಂದು ವಿಶ್ವಹಿಂದೂ ಪರಿಷತ್ ಒತ್ತಾಯಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿದ ಅವರು ಬರ್ಬರವಾಗಿ ಫಯಾಜ್ 9 ಬಾರಿ ಇರಿದು ನೇಹಾಳನ್ನು ಕೊಲೆ ಮಾಡಿದ್ದಾನೆ. ನೇಹಾಳ ತಂದೆ ಇದೊಂದು ಲವ್ ಜಿಹಾದ್ ಕೃತ್ಯ ಎಂದು ಹೇಳಿಕೆ ನೀಡಿದ್ದು, ಈ ಘಟನೆಯ ಹಿಂದೇ ಫಯಾಜ್‌ನ ಹಿಂದೆ ಆತನ ಸ್ನೇಹಿತರು, ಮುಸ್ಲಿಂ ಜಿಹಾದಿ ಸಂಘಟನೆಗಳ ಕೈವಾಡವಿರುವ ಶಂಕೆ ಇದ್ದು, ಈ ಹಿನ್ನಲೆ ಈ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಬೇಕೆಂದು ಶರಣ್ ಪಂಪ್ ವೆಲ್ ಆಗ್ರಹಿಸಿದರು.
ಕಾಂಗ್ರೇಸ್ ಸರಕಾರ ಬಂದ ಮೇಲೆ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಸಾಯಿಮಂದಿರದಲ್ಲಿ ಬಿಜೆಪಿ ಮತ ಪ್ರಚಾರ ವೇಳೆ ಕಾಂಗ್ರೇಸ್ ನ ಮುಸ್ಲಿಂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ರಾಜ್ಯ ಸರಕಾರ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್ ನಲ್ಲಿ ಮಹಿಳೆಯರಿಗೆ ಕಿರುಗತ್ತಿ ಇಟ್ಟುಕೊಳ್ಳುವ ಅವಕಾಶ ಇದೆ. ಅದೇ ರೀತಿ ಕರ್ನಾಟಕದಲ್ಲೂ ಎಲ್ಲಾ ಮಹಿಳೆಯರು ಕಿರುಗತ್ತಿಯನ್ನು ತಮ್ಮಲ್ಲಿ ಇಟ್ಟುಕೊಳ್ಳಲು ರಾಜ್ಯ ಸರಕಾರ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ವಿಶೇಷ ತರಭೇತಿ ಶಿಬಿರವನ್ನು ಮಾಡಬೇಕೆಂದು ವಿನಂತಿಸಿದ್ದಾರೆ.