Connect with us

  LATEST NEWS

  ಆ ಅನಿಷ್ಟ ಕಾಂಗ್ರೇಸ್ ನಿಂದ ದೂರವಾಗಿ ಬಿಜೆಪಿಗೆ ಹೋಗಿದೆ – ವೀರಪ್ಪ ಮೊಯಿಲಿ

  ಮಂಗಳೂರು ಸೆಪ್ಟೆಂಬರ್ 23: ಜೆಡಿಎಸ್ ಹೊಕ್ಕಿದ ಕಡೆಯಲ್ಲಿ ಸಂಪೂರ್ಣ ಹಾಳಾಗುತ್ತದೆ. ಅವರ ಜೊತೆ ಸೇರಿ ಆವತ್ತು ನಾನು ಕೂಡ ಸೋತಿದ್ದೇನೆ. ಈಗ ಆ ಅನಿಷ್ಟ ದೂರವಾಗಿದೆ, ಈಗ ಅದು ಬಿಜೆಪಿಗೆ ಹೋಗಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

  ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೆಡಿಎಸ್ ಹೊಕ್ಕಿದ ಕಡೆಯಲ್ಲಿ ಸಂಪೂರ್ಣ ಹೋಯ್ತು ಅಂತ ಅರ್ಥ, ಅವರ ಜೊತೆ ಸೇರಿ ಆವತ್ತು ನಾನು ಕೂಡ ಸೋತಿದ್ದೇನೆ, ಈಗ ಆ ಅನಿಷ್ಟ ಕಾಂಗ್ರೇಸ್ ನಿಂದ ದೂರವಾಗಿ ಬಿಜೆಪಿಗೆ ಹೋಗಿದೆ ಎಂದರು.
  ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡುತ್ತೇನೆ. ಮೂರು ಡಿಸಿಎಂ (DCM) ಪಕ್ಷದ ಅಭಿಪ್ರಾಯ ಅಲ್ಲ, ಕೆಲವರ ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷ ಬಲಿಷ್ಠವಾಗಿದೆ, ಅದರೆ ಕೆಲವರು ಪಕ್ಷ ಗಟ್ಟಿ ಮಾಡಲು ಹೇಳುತ್ತಾರೆ. ಅವರ ಸಲಹೆ ಸೂಚನೆಗಳನ್ನೂ ನಾವು ಕೇಳುತ್ತೇವೆ. ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಆದರೆ ಸದ್ಯಕ್ಕೆ ಮೂರು ಡಿಸಿಎಂ ಚರ್ಚೆ ಇಲ್ಲ ಎಂದು ತಿಳಿಸಿದರು

  Share Information
  Advertisement
  Click to comment

  You must be logged in to post a comment Login

  Leave a Reply