Connect with us

    LATEST NEWS

    ಮಿಸ್ಟರ್ ಆ್ಯಂಡ್ ಮಿಸ್ ಟೀನ್ ಸೂಪರ್ ಗ್ಲೋಬ್ ನಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರಿನ ವರುಣ್ ಶೆಲ್ಡನ್ ಡಿಕೋಸ್ತಾ‌

    ಮಂಗಳೂರು ಅಗಸ್ಟ 13: ಥೈಲ್ಯಾಂಡ್ ನಲ್ಲಿ ನಡೆದ ಫ್ಯಾಷನ್ ರನ್ ವೇ ಅರುಣ್ ರತ್ನ ಅವರ ಮಿಸ್ಟರ್ ಆ್ಯಂಡ್ ಮಿಸ್ ಟೀನ್ ಸೂಪರ್ ಗ್ಲೋಬ್ 2024 ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ಮಂಗಳೂರಿನ ಬಜಪೆ ನಿವಾಸಿ ವಿನ್ಸೆಂಟ್ ಡಿಕೋಸ್ತ ಲಿಡ್ವಿನ್ ಡಿಕೋಸ್ತ ದಂಪತಿಗಳ ಪುತ್ರ ವರುಣ್ ಶೆಲ್ಡನ್ ಡಿಕೋಸ್ತಾ‌ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಯೆರಾ ಲರ್ನಿಂಗ್ ಅಕಾಡೆಮಿಯ ಸ್ಫಾಟ್ ಲೈಟ್ ಮತ್ತು ಡಿಕೋಸ್ತಾ ಕುಟುಂಬಸ್ಥರು, ಸ್ನೇಹಿತರು ಸೇರಿ ಅದ್ದೂರಿಯಾಗಿ ಸ್ವಾಗತಿಸಿದರು.


    ಈ ವೇಳೆ ಮಾತನಾಡಿ ವರುಣ್ ಡಿಕೋಸ್ತಾ ಒಂದು ವಾರಗಳಿಂದ ಥೈಲ್ಯಾಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಿಸ್ಟರ್ ಆ್ಯಂಡ್ ಮಿಸ್ ಟೀನ್ ಸೂಪರ್ ಗ್ಲೋಬ್ 2024 ಸ್ಪರ್ಧೆಯಲ್ಲಿ 13 ವರ್ಷದಿಂದ 15 ವರ್ಷಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಬಂದಿದೆ.


    ಈ ಹಿಂದೆ ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ 21 ದೇಶಗಳ 57 ಸ್ಪರ್ಧಿಗಳ ಪೈಕಿ ಪ್ರಥಮ ಸ್ಥಾನ ಪಡೆದಿದ್ದೇನೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ ಎಂದರು. ದೇಶವನ್ನು ಪ್ರತಿನಿಧಿಸುವ ಅವಕಾಶ ನನಗೆ ಲಭಿಸಿದ್ದು ಎಂದವರು ಹೇಳಿದರು. ಈ ವೇಳೆ ವಿ.ಜೆ ಡಿಕ್ಸನ್, ಸಂತೋಷ್ ಶೆಟ್ಟಿ ಮೂಡಬಿದಿರೆ, ಪ್ರಕಾಶ್ ಜೈನ್, ಜನಾರ್ದನ ಬಂಗೇರ ಮೂಡಬಿದಿರೆ, ಹರಿದಾಸ್, ಬಜಪೆ ಕ್ಯಾಥೊಲಿಕ್ ವಲಯ ಅಧ್ಯಕ್ಷ ಜೋಕಿಮ್ ಡಿಕೋಸ್ತಾ, ಬಜಪೆ ಚರ್ಚ್ ಸಂಪಾದಕರಾದ ಪ್ರಸನ್ನ ಡಿಸೋಜ, ಪ್ರತಿನಿಧಿ ಕ್ಲಿಫರ್ಡ್ ಪಿರೇರಾ, ಅದ್ಯಪಾಡಿ ಚರ್ಚ್ ನ ಯುವ ಸಂಚಾಲಕದ ಅಧ್ಯಕ್ಷ ಆಲ್ವಿನ್ ಮಥಾಯಿಸ್ ಮತ್ತಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply