LATEST NEWS
ವಾರಾಹಿ ಪಾತ್ರದ ಜನತೆಗೆ ಪ್ರವಾಹ ಮುನ್ನೆಚ್ಚರಿಕೆಯ ಸೂಚನೆ
ವಾರಾಹಿ ಪಾತ್ರದ ಜನತೆಗೆ ಪ್ರವಾಹ ಮುನ್ನೆಚ್ಚರಿಕೆಯ ಸೂಚನೆ
ಉಡುಪಿ, ಆಗಸ್ಟ್ 14: ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿಯುತ್ತಿರು ಭಾರಿ ಮಳೆ ಹಿನ್ನಲೆಯಲ್ಲಿ ವಾರಾಹಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.
ಎತ್ತಣಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುವುದರಿಂದ, ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ, ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಂದರ್ಭದಲ್ಲಿ ಹೊರಬಿಡಲಾಗುವುದೆಂದು ಕಾರ್ಯಪಾಲಕ ಇಂಜಿನಿಯರ್, ನಂ-2 ವಾರಾಹಿ ಜಲಾಶಯ ಯೋಜನಾ ವಿಭಾಗ ಸಿದ್ದಾಪುರ ಪ್ರಕಟಣೆ ತಿಳಿಸಿದೆ.
ಈ ಹಿನ್ನಲೆಯಲ್ಲಿ ಮಾಣಿ ಜಲಾಶಯದಿಂದ ಹೆಚ್ಚುವರಿಯಾದ ನೀರನ್ನು ಯಾವುದೇ ಸಂದರ್ಭದಲ್ಲಿ ಹೊರ ಬಿಡಲಾಗುವುದರಿಂದ ಮತ್ತು ವಾರಾಹಿ ಡೈವರ್ಶನ್ ವಿಯರ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಿರುವುದರಿಂದ, ವಾರಾಹಿ ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಕುಟುಂಬಗಳಿಗೆ ತೊಂದರೆಯಾಗುವ ಸಂಭವವಿರುತ್ತದೆ.
ಆದುದರಿಂದ ಈ ಪ್ರದೇಶದಲ್ಲಿರುವ ಕುಟುಂಬಗಳು ಹಾಗೂ ಅವರ ಜಾನುವಾರಗಳು ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ಸುರಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಾರ್ಯಪಾಲಕ ಇಂಜಿನಿಯರ್, ನಂ-2 ವಾರಾಹಿ ಜಲಾಶಯ ಯೋಜನಾ ವಿಭಾಗ , ಸಿದ್ದಾಪುರ ಅವರ ಪ್ರಕಟಣೆ ತಿಳಿಸಿದೆ.
You must be logged in to post a comment Login