Connect with us

FILM

ಅಮೆಜಾನ್ ಪ್ರೈಮ್ ನಲ್ಲಿ ವರಾಹ ರೂಪಂ ಹಾಡಿನ ಟ್ಯೂನ್ ಚೆಂಜ್……!!

ಬೆಂಗಳೂರು ನವೆಂಬರ್ 24 : ಕಾಂತಾರ ಸಿನೆಮಾ ಇಂದಿನಿಂದ ಓಟಿಟಿಯಲ್ಲೂ ಲಭ್ಯವಿದೆ.ಥಿಯೇಟರ್ ನಲ್ಲಿ ನೋಡದ ಜನರು ಇದೀಗ ಮೊಬೈಲ್ ನಲ್ಲೂ ಕಾಂತಾರ ಸಿನೆಮಾವನ್ನು ನೋಡಬಹುದಾಗಿದೆ. ಆದರೆ ಚಿತ್ರದ ಜೀವಾಳವೆಂದೇ ಹೇಳಲಾಗಿದ್ದ ವರಾಹ ರೂಪಂ ಹಾಡಿನ ಟ್ಯೂನ್ ಅನ್ನು ಸಂಪೂರ್ಣವಾಗಿ ಬದಲಿಸಲಾಗಿದೆ.


ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ ವರಾಹ ರೂಪಂ ಹಾಡಿನ ವಿರುದ್ದ ಕೋರ್ಟ್ ಮೆಟ್ಟಿಲೇರಿತ್ತು. ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು ಅರ್ಜಿ ವಿಚಾರಣೆ ನಡೆಸಿ, ‘ಹಾಡನ್ನು ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಬಾರದು’ ಎಂದು ಆದೇಶ ನೀಡಿದ್ದವು. ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಈ ಆದೇಶವನ್ನು ಕೇರಳ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿತ್ತು. ಆದರೆ, ಕೋರ್ಟ್​ ಈ ಅರ್ಜಿಯನ್ನು ತಿರಸ್ಕರಿಸಿದ್ದು, ‘ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿದರೆ ಅರ್ಜಿದಾರರ ಶಾಸನಬದ್ಧ ಹಕ್ಕುಗಳಿಗೆ ಚ್ಯುತಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.


ಈ ಹಿನ್ನಲೆ ಇದೀಗ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಿರುವ ಕಾಂತಾರದಲ್ಲಿ ಓರಿಜಿನಲ್ ಹಾಡು ಮಿಸ್ ಆಗಿದೆ. ವರಾಹ ರೂಪಂ ಹಾಡಿನ ಟ್ಯೂನ್ ನ್ನು ಸಂಪೂರ್ಣವಾಗಿ ಬದಲಿಸಲಾಗಿದ್ದು, ಮೊದಲಿನ ಹಾಡಿನಲ್ಲಿ ಮೋಡಿ ಇದರಲ್ಲಿ ಪ್ರೇಕ್ಷಕರಿಗೆ ಸಿಗುತ್ತಿಲ್ಲ.
ಸದ್ಯ ಕೇರಳ ಹೈಕೋರ್ಟ್ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಿ ಎಂದಿದ್ದು, ಹೊಂಬಾಳೆ ಫಿಲ್ಸ್ ನ ಮುಂದಿನ ಹೆಜ್ಜೆ ಏನು ಎನ್ನುವುದು ಕುತೂಹಲದಿಂದ ಕೂಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *