Connect with us

LATEST NEWS

ದಾಖಲೆ ಮುರಿದ ‘ವಂದೆ ಭಾರತ’ ರೈಲು: 52 ಸೆಕೆಂಡ್‌ಗಳಲ್ಲಿ 100 ಕಿ.ಮೀ.ವೇಗ

ವದೆಹಲಿ, ಸೆಪ್ಟೆಂಬರ್ 12: ಸೆಮಿ ಹೈಸ್ಪೀಡ್‌ ರೈಲು ‘ವಂದೆ ಭಾರತ’ ಎಕ್ಸ್‌ಪ್ರೆಸ್ 52 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್‌ ಟ್ರೇನ್‌ನ ದಾಖಲೆಯನ್ನು ಮುರಿದಿದೆ.

ಅಹಮದಾಬಾದ್‌-ಮುಂಬೈ ನಡುವೆ ಶುಕ್ರವಾರ ಈ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಗಂಟೆಗೆ 130 ಕಿ.ಮೀ ವೇಗದೊಂದಿಗೆ ತಡೆರಹಿತವಾಗಿ ಚಲಿಸಿದ ರೈಲು, ಈ ನಗರಗಳ ನಡುವಿನ 491 ಕಿ.ಮೀ. ದೂರವನ್ನು 5 ಗಂಟೆ 14 ನಿಮಿಷಗಳಲ್ಲಿ ಕ್ರಮಿಸಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಗದಿತ ವೇಳಾಪಟ್ಟಿ ಹಾಗೂ ನಿಲುಗಡೆಗಳೊಂದಿಗೆ ಸಂಚರಿಸಿದ ಸಂದರ್ಭದಲ್ಲಿ ಇಷ್ಟೇ ದೂರವನ್ನು ಈ ರೈಲು 6 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ ಎಂದೂ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *