Connect with us

    KARNATAKA

    3ಕಿ.ಮೀ ಓಡಿ ಹೋಗಿ ರೋಗಿಗೆ ಆಪರೇಷನ್‌ ಮಾಡಿದ ಡಾಕ್ಟರ್..!

    ಬೆಂಗಳೂರು, ಸೆಪ್ಟೆಂಬರ್ 11: ರೋಗಿಯ ಅಗತ್ಯ ಶಸ್ತ್ರಚಿಕಿತ್ಸೆಗೆ ಟ್ರಾಫಿಕ್ ಜಾಂನಲ್ಲಿ ಸಿಲುಕಿದ್ದ ವೈದ್ಯರೊಬ್ಬರು ಮೂರು ಕಿ.ಮೀ ಓಡಿ ಬಂದು ಯಶಸ್ವಿಯಾಗಿ ಶಸ್ತ್ರಕ್ರಿಯೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರಾಗಿರುವ ಗೋವಿಂದ ನಂದಕುಮಾರ್ ಅವರು ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಂನಲ್ಲಿ ಸಿಲುಕಿದ್ದರು. ಆದರೆ ರೋಗಿಯೊಬ್ಬರ ಶಸ್ತ್ರಚಿಕಿತ್ಸೆಗಾಗಿ ತಮ್ಮ ಕಾರು ಬಿಟ್ಟು 3ಕಿ.ಮೀ ಓಡಿಕೊಂಡು ಆಸ್ಪತ್ರೆಗೆ ತಲುಪಿದ್ದಾರೆ.ಆ.30 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಡಾಕ್ಟರ್ ಗೋವಿಂದ್ ಅವರು ಸರ್ಜಾಪುರ-ಮಾರತಹಳ್ಳಿ ರಸ್ತೆಯ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು.

    ಆದರೆ ಆಪರೇಶನ್‌ಗೆ ತಡವಾಗುತ್ತದೆ ಎಂದರಿತ ಇವರು ಕಾರನ್ನು ಬಿಟ್ಟು 3ಕಿ.ಮೀ ದೂರದವರೆಗೂ ಆಸ್ಪತ್ರೆಗೆ ಓಡಿ ಹೋಗಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಕರ್ತವ್ಯನಿಷ್ಠೆ ಮೆರೆದ ವೈದ್ಯ ಗೋವಿಂದ್ ನಂದಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶಂಸೆ ವ್ಯಕ್ತಗೊಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply