BANTWAL
ಕಾಲಲ್ಲೇ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ಕೌಶಿಕ್ ನನ್ನು ಡಿವೈಎಸ್ಪಿ ವ್ಯಾಲಂಟೈನ್ ಡಿಸೋಜಾ ಅವರಿಂದ ಅಭಿನಂದನೆ

ಬಂಟ್ವಾಳ ಅಗಸ್ಟ್ 15: ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆದು ಎಸ್ಎಸ್ಎಲ್ ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಕೌಶಿಕ್ ನ ಮನೆಗೆ ಬಂಟ್ವಾಳ ಡಿವೈಎಸ್ಪಿ.ವೆಲೆಂಟೈನ್ ಡಿ.ಸೋಜ ಬೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕಂಚಿಕಾರ ಪೇಟೆ ನಿವಾಸಿ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ರವರ ಮಗ ಕೌಶಿಕ್ ಆಚಾರ್ಯ ರವರು ತನ್ನ ಹುಟ್ಟಿನಿಂದಲೇ ಎರಡೂ ಕೈಗಳು ಇಲ್ಲದೆ ಇದ್ದರೂ ಕಾಲಿನಲ್ಲೆ 2019-20 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾನೆ. ಕೌಶಿಕ್ ಕಾಲಿನಲ್ಲಿ ಎಸ್ ಎಸ್ಎಲ್ ಸಿ ಪರೀಕ್ಷೆ ಬರೆಯುವುದನ್ನು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚಿ ಅಭಿನಂದನೆ ಸಲ್ಲಿಸಿದ್ದರು.

ಈಗ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 424 ಅಂಕ (67.74%) ಗಳಿಸಿರುವ ಹೆಮ್ಮೆಯ ಸಾಧನೆಯನ್ನು ಅಭಿನಂದಿಸಿ 74 ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೆಲೆಂಟೈನ್ ಡಿಸೋಜ ಹಾಗೂ ಉಪವಿಭಾಗ ಕಛೇರಿ ಸಿಬ್ಬಂದಿಗಳು ಕೌಶಿಕ್ ರವರ ಮನೆಗೆ ಭೇಟಿ ನೀಡಿ ಸ್ಮರಣಿಕೆ ನೀಡಿ ಗೌರವಿಸಿ, ಧನ ಸಹಾಯವನ್ನು ಮಾಡಿ ಆತನ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನಕ್ಕೆ ಶುಭ ಹಾರೈಸಿದರು.