LATEST NEWS
ಔತಣ ಕೂಟಕ್ಕೆ ಶೋಭಾಕರಂದ್ಲಾಜೆ ಕರೆದಿಲ್ಲ ಎಂಬ ಬೇಸರದಿಂದ ಹೇಳಿಕೆ – ಖಾದರ್

ಔತಣ ಕೂಟಕ್ಕೆ ಶೋಭಾಕರಂದ್ಲಾಜೆ ಕರೆದಿಲ್ಲ ಎಂಬ ಬೇಸರದಿಂದ ಹೇಳಿಕೆ – ಖಾದರ್
ಮಂಗಳೂರು ಫೆಬ್ರವರಿ 2:ಶೋಭಾ ಕರಂದ್ಲಾಜೆಯವರನ್ನು ಔತಣಕ್ಕೆ ಕರೆದಿಲ್ಲ ಎಂದು ಬೇಸರದಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಗೃಹಸಚಿವರ ಸ್ಕ್ರೂ ಡ್ರೈವರಿನಿಂದ ಕೊಲೆ ಹೇಳಿಕೆ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ ಅವರು ಮಗನನ್ನು ಕಳೆದು ಕೊಂಡ ಸಂತೋಷ್ ಅವರ ಪೋಷಕರಿಗಾದ ನೋವು ವಿವರಿಸಲು ಸಾಧ್ಯ ವಿಲ್ಲ ಎಂದು ತಿಳಿದರು.

ಔತಣಕ್ಕೆ ತೆರಳಿದ ಸಿಎಂ ಸಂತೋಷ್ ಮನೆಗೆ ಹೋಗಿಲ್ಲವೆಂದು ಶೋಭಾ ಹೇಳಿಕೆ ವಿಚಾರ ಕುರಿತು ಮಾತನಾಡಿದ ಖಾದರ್ ಔತಣ ಕೂಟಕ್ಕೆ ಸಂಸದೆ ಶೋಭಾ ಅರನ್ನು ಕರೆದಿಲ್ಲವೆಂಬ ಬೇಸರದಿಂದ ಹೇಳಿಕೆ ನೀಡಿರಬೇಕು ಎಂದು ವ್ಯಂಗ್ಯವಾಡಿದರು.ಆದರೆ, ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ತೆರಳಿ ನವಾಜ್ ಷರೀಫ್ ಮನೆಯಲ್ಲಿ ಚಾ ಕುಡಿದಾಗ ಇವರಾರು ಮಾತನಾಡಲಿಲ್ಲ ಎಂದು ಕಿಡಿಕಾರಿದ ಅವರು ಗಡಿಯಲ್ಲಿ ಅಷ್ಟು ಯೋಧರ ಸಾವಾಗಿದ್ದರೂ ಯಾವ ಯೋಧರ ಮನೆಗೂ ಪ್ರಧಾನಿ ಹೋಗಿ ಗೌರವ ಸೂಚಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.