FILM
ಈ ನಟಿಗೆ ಈಗ ಸದ್ಯ ಟೊಮ್ಯಾಟೋ ನೇ ಚಿನ್ನದ ಆಭರಣ

ಮುಂಬೈ ಜುಲೈ 19: ಟೊಮ್ಯಾಟೋ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸದಾ ವಿಭಿನ್ನ ಬಟ್ಟೆ ಧರಿಸುವ ಮೂಲಕ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ಚಿನ್ನದ ಆಭರಣ ಬದಲು ಟೊಮ್ಯಾಟೋ ಹಣ್ಣುಗಳನ್ನೇ ಆಭರಣ ರೀತಿ ಧರಿಸಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿವೆ.
ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸುವ ಮೂಲಕ ಉರ್ಫಿ ಜಾವೇದ್ ಅವರು ಸಖತ್ ಜನಪ್ರಿಯತೆ ಪಡೆದರು. ಅಲ್ಲಿ ಅವರು ಹೈಲೈಟ್ ಆಗಿದ್ದೇ ಉಡುಗೆ ತೊಡುಗೆಯ ಕಾರಣದಿಂದ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಅವರು ಅದೇ ಅಭ್ಯಾಸ ಮುಂದುವರಿಸಿದರು.

ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಧರಿಸುವ ಮೂಲಕ ಅವರು ಸುದ್ದಿ ಆಗಿದ್ದೇ ಹೆಚ್ಚು. ಈಗ ಅವರು ಟೊಮ್ಯಾಟೋ ಹಣ್ಣುಗಳನ್ನು ಆಭರಣದ ರೀತಿ ಧರಿಸಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.