LATEST NEWS
ಬಸ್ ಗಳ ವಿರುದ್ದ ಉಡುಪಿ ಜಿಲ್ಲಾಧಿಕಾರಿ ದಿಢೀರ್ ದಾಳಿ…. ಮನೆಗೆ ತೆರಳಲು ಬಸ್ ಸಿಗದೆ ಸಂಕಷ್ಟ ಅನುಭವಿಸಿದ ವಿಧ್ಯಾರ್ಥಿನಿಯರು…!!
ಉಡುಪಿ ಎಪ್ರಿಲ್ 20: ಕೊರೊನಾ ಎರಡನೇ ಅಲೆ ಹಿನ್ನಲೆ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೆ ಬಸ್ ಗಳಲ್ಲಿ ನಿಯಮಕ್ಕಿಂತ ಅಧಿಕ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಬಸ್ ಗಳ ಮೇಲೆ ನಿನ್ನೆ ದಿಢೀರ್ ದಾಳಿ ನಡೆಸಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿರುದ್ದ ಈಗ ಆಕ್ರೋಶ ವ್ಯಕ್ತವಾಗಿದ್ದು, ಪರೀಕ್ಷೆ ಬರೆದು ಮನೆಗೆ ಹೊರಟ ವಿಧ್ಯಾರ್ಥಿನಿಯರನ್ನು ಸಂಜೆ ಹೊತ್ತಲ್ಲಿ ಬಸ್ ನಿಂದ ಇಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತದ ವಿರುದ್ದ ವಿಧ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ತನ್ನ ನೋವನ್ನು ತೋಡಿಕೊಂಡಿದ್ದಾರೆ.
ಕೊರೊನಾ ಎರಡನೇ ಅಲೆ ನಡುವೆಯೂ ಮಂಗಳೂರು ವಿವಿ ಪದವಿ ಪರೀಕ್ಷೆಗಳನ್ನು ನಡೆಸುತ್ತಿದ್ದೆ. ಈ ನಡುವೆ ಕೆಎಸ್ ಆರ್ ಟಿಸಿ ಬಸ್ ಮುಷ್ಕರ ನಡೆಯುತ್ತಿದ್ದು, ರಸ್ತೆಯಲ್ಲಿರುವ ಕೆಲವೆ ಕೆಲವು ಬಸ್ ಗಳಲ್ಲಿ ಜನ ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಆದರೆ ಕೊರೊನಾ ಎರಡನೇ ಅಲೆ ಹಿನ್ನಲೆ ರಾಜ್ಯ ಸರಕಾರವು ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದು, ಪಾಲನೆ ಆಗದಿದ್ದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಹೇಳಿದೆ. ಈ ಹಿನ್ನಲೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಸಾರ್ವಜನಿಕರು ಸರ್ಕಾರದ ಸೂಚನೆಯ ನಂತರವೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿರುವ ಕುರಿತು ಜಾಗೃತಿ ಮೂಡಿಸಿ ದಂಡ ವಿಧಿಸುವ ಕುರಿತಂತೆ ನಿನ್ನೆ ಸಂಜೆ ಸಂತೆಕಟ್ಟೆಯಲ್ಲಿ ದಿಢೀರ್ ದಾಳಿ ನಡೆಸಿದರು.
ಬಸ್ ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಜಿಲ್ಲಾದಿಕಾರಿಗಳು ಅವರೆಲ್ಲರಿಗೂ ಟಿಕೆಟ್ ನ ಮೊತ್ತವನ್ನು ಹಿಂದಿರುಗಿಸುವಂತೆ ಕಂಡಕ್ಟರ್ ಗೆ ಸೂಚಿಸಿ, ಸರ್ಕಾರದ ಆದೇಶವಿದ್ದರೂ ಹೆಚ್ಚಿನ ಜನರನ್ನು ಕರೆದೊಯ್ಯುತ್ತಿದ್ದ ಚಾಲಕ ಮತ್ತು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರಯಾಣಿಕರಿಗೂ ಸಹ ಬುದ್ದಿವಾದ ಹೇಳಿದ ಡಿಸಿ , ಬಸ್ ನಲ್ಲಿ ಸೀಟ್ ಇಲ್ಲವಾದಲ್ಲಿ ನಂತರದ ಬಸ್ ನಲ್ಲಿ ಸಂಚರಿಸುಲವಂತೆ ಸೂಚಿಸಿದ್ದರು.
ಆದರೆ ಸಮಸ್ಯೆ ಆಗಿದ್ದೆ ಇಲ್ಲಿ.. ದೂರದ ಉರಿನಿಂದ ಪರೀಕ್ಷೆ ಬರೆಯಲು ಬಂದ ವಿಧ್ಯಾರ್ಥಿಗಳಿಗೆ ಮರಳಿ ಮನೆಗೆ ತೆರಳು ಇರುವುದು ಕೆಲವೇ ಬಸ್ ಗಳು ಅದು ಕೂಡ ಸಂಜೆ ಸಂದರ್ಭ ಯಾವಾಗಲೂ ತುಂಬಿರುತ್ತದೆ. ಜಿಲ್ಲಾಧಿಕಾರಿ ದಾಳಿ ಸಂದರ್ಭ ಕಾಲೇಜು ಪರೀಕ್ಷೆ ಮುಗಿಸಿ ಊರಿಗೆ ತೆರಳಲು ಬಸ್ ಹತ್ತಿದ ವಿದ್ಯಾರ್ಥಿನಿಯರನ್ನು ಕೆಳೆಗೆ ಇಳಿಸಲಾಗಿತ್ತು ಕಾರಣ ಬಸ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದರು. ಆದರೆ ದೂರದ ಊರಿನಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಕೇವಲ ಒಂದೊ ಎರಡೋ ಬಸ್ ಇರುತ್ತೆ ಪರೀಕ್ಷೆ ರದ್ದು ಮಾಡದೆ ಇದ್ದಕಾರಣ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿ ಮಾಧ್ಯಮದ ಮುಂದೆ ತಮ್ಮ ನೋವು ಹೇಳಿಕೊಂಡರು.