DAKSHINA KANNADA
ಉಪ್ಪಿನಂಗಡಿ – ಹಿಜಬ್ ತೆಗೆದಿಟ್ಟು ತರಗತಿಗೆ ಬಂದ 46 ಮುಸ್ಲಿಂ ವಿಧ್ಯಾರ್ಥಿನಿಯರು
ಉಪ್ಪಿನಂಗಡಿ ಜೂನ್ 09: ಕೊನೆಗೂ ಉಪ್ಪಿನಂಗಡಿ ಹಿಜಬ್ ವಿವಾದ ಸುಖಾಂತ್ಯ ಕಾಣುವು ಎಲ್ಲಾ ಲಕ್ಷಣ ಕಂಡು ಬಂದಿದ್ದು. ಇದೀಗ 46 ವಿಧ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರ ನಿಯಮಾವಳಿಗೆ ಒಳಪಟ್ಟು ಹಿಜಬ್ ತೆಗೆದು ತರಗತಿಗೆ ಪ್ರವೇಶಿಸಿದ್ದಾರೆ.
ಹಿಜಾಬ್ ವಿಚಾರವಾಗಿ ಪ್ರತಿಭಟನೆ ನಡೆಸಿ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ ಆರು ವಿಧ್ಯಾರ್ಥಿನಿಯರು ನಿನ್ನೆ ತರಗತಿಗೆ ಬಂದಿದ್ದು, ಕಾಲೇಜಿನ ಸಮವಸ್ತ್ರ ನಿಯಮಾಳಿಯನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ.
ಈ ಹಿನ್ನಲೆ ಇವರ ಮೇಲಿನ ನಿರ್ಬಂಧವನ್ನು ಹಿಂಪಡೆದ ಕಾಲೇಜು ಆಡಳಿಕ ಮಂಡಳಿ ಅವರಿಗೆ ತರಗತಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಅಲ್ಲದೆ 29 ಮಂದಿ ಹಾಗೂ ಕಾಲೇಜಿಗೂ ಬರದೆ, ಪ್ರತಿಭಟನೆಯಲ್ಲೂ ಪಾಲ್ಗೊಳ್ಳದೆ ಅಂತರ ಕಾಯ್ದುಕೊಂಡಿದ್ದ 11 ಮಂದಿ ವಿದ್ಯಾರ್ಥಿನಿಯರು ಸೇರಿ ಒಟ್ಟು 46 ವಿದ್ಯಾರ್ಥಿನಿಯರು ಬುಧವಾರ ಸಮವಸ್ತ್ರ ಧರಿಸಿ, ತರಗತಿಗೆ ಹಾಜರಾಗಿದ್ದಾರೆ.
ಈ ನಡುವೆ ಕಳೆದ ವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಅಮಾನತು ಆಗಿರುವ 24 ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ. ಕಾಲೇಜಿನಲ್ಲಿ ಒಟ್ಟು 101 ಮುಸ್ಲಿಂ ವಿದ್ಯಾರ್ಥಿನಿಯರು ಇದ್ದು, ಈ ಪೈಕಿ 46 ವಿದ್ಯಾರ್ಥಿನಿಯರು ತರಗತಿಗೆ ಹಾಜರಾದಂತಾಗಿದೆ. ಉಳಿದ ವಿದ್ಯಾರ್ಥಿನಿಯರು ಗುರುವಾರದಿಂದ ಕಾಲೇಜಿಗೆ ಬರಬಹುದೆಂಬ ನಿರೀಕ್ಷೆಯಲ್ಲಿ ಉಪನ್ಯಾಸಕರು ಇದ್ದಾರೆ.