DAKSHINA KANNADA
ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಮೇಲ್ಛಾವಣಿ ಕುಸಿತ

ಉಪ್ಪಿನಂಗಡಿ ಫೆಬ್ರವರಿ 24: ಉಪ್ಪಿನಂಗಡಿ ಸರಕಾರಿ ಫ್ರೌಢಶಾಲೆಯ ಮೇಲ್ಚಾವಣಿ ಕುಸಿದು ಬಿದ್ದ ಘಟನೆ ಭಾನುವಾರ ನಡೆದಿದೆ. ಹಳೆಯ ಕಟ್ಟಡ ಇದಾಗಿದ್ದು, ಅದರ ಪಕ್ಕಾಸು ಮತ್ತು ರೀಪು ದುರ್ಬಲವಾಗಿದ್ದರಿಂದ ಕುಸಿದಿದೆ. ಈ ಕಟ್ಟಡದ ಕೊಠಡಿಗಳಲ್ಲಿ ತರಗತಿ ನಡೆಯುತ್ತಿದ್ದು, ಭಾನುವಾರ ರಜೆ ಇದ್ದುದರಿಂದ ವಿದ್ಯಾರ್ಥಿಗಳು ಇರಲಿಲ್ಲ. ಹೀಗಾಗಿ ಅಪಾಯ ತಪ್ಪಿದೆ.
ಹಳೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದರೆ ಮಕ್ಕಳ ಹಿತಕ್ಕಾಗಿ ಅದನ್ನು ತೆರವುಗೊಳಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
