KARNATAKA
ನಾನು ಅದೇ ಊರಿನಿಂದ ಬಂದವನು, ನನಗೆ ವಿಶೇಷವಾದ ನಂಬಿಕೆ ಇದೆ – ಉಪೇಂದ್ರ

ಬೆಂಗಳೂರು ಅಕ್ಟೋಬರ್ 20: ಭೂತಕೊಲ ಹಿಂದೂ ಸಂಸ್ಕೃತಿಯ ಅಲ್ಲ ಎಂದು ‘ಆ ದಿನಗಳು ಖ್ಯಾತಿಯ ನಟ ಚೇತನ್ ಹೇಳಿಕೆಗೆ ನಟ ಉಪೇಂದ್ರ ತಿರುಗೇಟು ನೀಡಿದ್ದು, ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿನ್ನೆ ಘಟನೆಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ. ಬೆಂಕಿಗೆ ತುಪ್ಪ ಸುರಿಯುವ ಕೆಲಸ ಯಾರು ಮಾಡಬಾರದು. ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಬಿಕೆ. ನಾನು ಅದೇ ಊರಿನಿಂದ ಬಂದವನು, ನನಗೆ ವಿಶೇಷವಾದ ನಂಬಿಕೆ ಇದೆ. ಜೊತೆಗೆ ನನ್ನ ತಂದೆ ಇವತ್ತಿಗೂ ನಾಗಾರಾದನೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಉಪೇಂದ್ರ ಹೇಳಿದ್ದಾರೆ.
