LATEST NEWS
ಯುಪಿಸಿಎಲ್ ನಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟ 2ನೇ ಘಟಕ ಸ್ಥಗಿತ
ಯುಪಿಸಿಎಲ್ ನಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟ 2ನೇ ಘಟಕ ಸ್ಥಗಿತ
ಉಡುಪಿ ಸೆಪ್ಟೆಂಬರ್ 27: ಅದಾನಿ – ಯುಪಿಸಿಎಲ್ 2ನೇ ಘಟಕ ಆಂತರಿಕ ಟ್ರಾನ್ಸ್ ಫಾರ್ಮರ್ ಬುಧವಾರ ಸ್ಪೋಟಗೊಂಡ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ಉಡುಪಿಯ ಪಡುಬಿದ್ರೆಯಲ್ಲಿರುವ ಅದಾನಿ ಒಡೆತನದ ಯುಪಿಸಿಎಲ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಯುಪಿಸಿಎಲ್ ವಿದ್ಯುತ್ ಸ್ಥಾವರದ 2 ನೇ ಘಟಕದ ಆಂತರಿಕ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು 600 ಮೆ.ವ್ಯಾ. ಸಾಮರ್ಥ್ಯದ ಎರಡನೇ ಘಟಕ ಸ್ಥಗಿತಗೊಂಡಿದೆ.
ಕಲ್ಪಿದ್ದಲು ಆಧಾರಿತ ಸ್ಥಾವರದಲ್ಲಿ ತಾಂತ್ರಿಕ ಕಾರಣದಿಂದ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡಿದೆ. ಈ ಸ್ಪೋಟದಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಯೋಜನಾ ಪ್ರದೇಶದಲ್ಲಿದ್ದ ಸಿಬ್ಬಂದಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಸ್ಥಾವರದ ಅಧಿಕಾರಿಗಳಿಂದ ಸ್ಪಷ್ಟನೆ ನೀಡಿದ್ದಾರೆ. ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ ಬಳಿಕ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲಿದೆ.