LATEST NEWS
1 ಪರ್ಸೆಂಟ್ ಕಮಿಷನ್ ಆರೋಗ್ಯ ಸಚಿವನನ್ನು ಕಿತ್ತುಹಾಕಿ ಅರೆಸ್ಟ್ ಮಾಡಿಸಿದ ಪಂಜಾಬ್ ಸಿಎಂ

ಪಂಜಾಬ್:ಅಧಿಕಾರಿಗಳಿಂದ ಗುತ್ತಿಗೆಗೆ 1 ಪರ್ಸೆಂಟ್ ಕಮಿಷನ್ ಬೇಡಿಕೆ ಇಟ್ಟ ಪಂಜಾಬ್ ಆರೋಗ್ಯ ಸಚಿವ ನನ್ನು ಸಂಪುಟದಿಂದ ಪಂಜಾಬ್ ಸಿಎಂ ಭಗವಂತ್ ಮಾನೆ ಕೈಬಿಟ್ಟಿದ್ದು, ಅಲ್ಲದೆ ಆರೋಪದ ಮೇಲೆ ಪೊಲೀಸರು ಆರೋಗ್ಯ ಸಚಿವನನ್ನು ಬಂಧಿಸಿದ್ದಾರೆ.
ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಬಗ್ಗೆ ಬಲವಾದ ಪುರಾವೆಗಳು ಲಭ್ಯವಾಗಿದ್ದು, ಸಂಪುಟದಿಂದ ಅವರನ್ನು ತೆಗೆದು ಹಾಕಿರುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿ ತಿಳಿಸಿದೆ. ‘ತಮ್ಮದೇ ಪಕ್ಷದ ಶಾಸಕರಾಗಲಿ, ಸಚಿವರಾಗಲಿ, ಯಾರಿಂದಲೇ ಭ್ರಷ್ಟಾಚಾರ ನಡೆದರೂ ಸರ್ಕಾರವು ಸಹಿಸುವುದಿಲ್ಲ ಎಂಬುದನ್ನು ಈ ಮೂಲಕ ಒತ್ತಿ ಹೇಳಲಾಗಿದೆ. ಭ್ರಷ್ಟಾಚಾರ ಆರೋಪದ ಮೇಲೆ ಆರೋಗ್ಯ ಸಚಿವರನ್ನು ವಜಾಗೊಳಿಸಲಾಗಿದೆ ಹಾಗೂ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪಂಜಾಬ್ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಪ್ರಕಟಿಸಿದೆ.
