Connect with us

    LATEST NEWS

    ಅಮ್ಮನನ್ನ ನೋಡಲು ಉಡುಪಿಗೆ ಬಂದ ಅಂಡರ್ ವರ್ಲ್ಡ್ ಡಾನ್

    ಅಮ್ಮನನ್ನ ನೋಡಲು ಉಡುಪಿಗೆ ಬಂದ ಅಂಡರ್ ವರ್ಲ್ಡ್ ಡಾನ್

    ಉಡುಪಿ ಜುಲೈ 8: ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜ ಉಡುಪಿಗೆ ತಾಯಿಯ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಸೋಮವಾರ ಬೆಳಿಗ್ಗೆ ಮಲ್ಪೆಯಲ್ಲಿರುವ ಅವರ ಮನೆಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿದ್ದು, ಮನೆಯ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

    ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಾನವೀಯ ನೆಲೆಯಲ್ಲಿ ಬನ್ನಂಜೆ ರಾಜಾಗೆ ಅವರ ತಾಯಿಯನ್ನು ಭೇಟಿ ಮಾಡಲು ನ್ಯಾಯಾಲಯ ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಬೆಳಗಾವಿ ಹಿಂಡಲಗಾ ಜೈಲಿನಿಂದ ಇಂದು ಉಡುಪಿಗೆ ಕರೆ ತಂದಿದ್ದಾರೆ.

    ಸೋಮವಾರ ಮಲ್ಪೆ ಸಮೀಪ ಇರುವ ಬನ್ನಂಜೆ ರಾಜಾ ಅವರ ಮನೆಯಲ್ಲಿರುವ ತಾಯಿಯನ್ನು ಸೋಮವಾರ ಭೇಟಿಗೆ ಅವಕಾಶ ನೀಡಲಾಗಿದೆ.

    ಇಂದು ಉಡುಪಿಗೆ ಬಂದಿರುವ ಬನ್ನಂಜೆ ರಾಜಾ ನನ್ನು ನಗರದ ಠಾಣೆಯಲ್ಲಿ ಉಳಿಸಿಕೊಳ್ಳಲಿದ್ದಾರೆ. ಬನ್ನಂಜೆ ರಾಜಾ ಆಗಮನದ ಹಿನ್ನಲೆಯಲ್ಲಿ ಉಡುಪಿ ನಗರ ಠಾಣೆ ಹಾಗೂ ಮಲ್ಪೆಯಲ್ಲಿರುವ ಬನ್ನಂಜೆ ಮನೆಯಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ
    2015ರಲ್ಲಿ ಮೊರೆಕ್ಕೋದಲ್ಲಿ ಬನ್ನಂಜೆ ರಾಜನ ಬಂಧನವಾಗಿತ್ತು,ಸುಮಾರು 15 ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಬನ್ನಂಜೆ ರಾಜಾ ವಿಚಾರಣಾ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply