KARNATAKA
ಅಪ್ರಾಪ್ತೆಯ ಅಂಕಲ್ ಜೊತೆಗಿನ ಲವ್ವಿಡವ್ವಿ ಸೂಸೈಡ್ ಪ್ರಕರಣ – ಮಹಿಳಾ ಸಾಂತ್ವಾನ ಕೇಂದ್ರದ ಮೇಲ್ವಿಚಾರಕಿ ಅರೆಸ್ಟ್

ರಾಯಚೂರು: ಸಣ್ಣ ವಯಸ್ಸಿನ ಹುಡುಗಿ ಹಾಗೂ ಅಂಕಲ್ ನ ಒಬ್ಬನ ನಡುವಿನ ಲವ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಮಹಿಳಾ ಸಾಂತ್ವಾನ ಕೇಂದ್ರದ ಮೇಲ್ವಿಚಾರಕಿಯನ್ನು ಬಂಧಿಸಲಾಗಿದೆ.ಬಾಲಕಿಯು ಸಾಂತ್ವಾನ ಕೇಂದ್ರದಿಂದ ತಪ್ಪಿಸಿಕೊಳ್ಳಲು ಮೇಲ್ವೀಚಾರಕಿ ಅನುರಾಧ ಕುಮ್ಮಕ್ಕು ನೀಡಿದ್ದಾಳೆಂದು ಅಪ್ರಾಪ್ತ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಅನುರಾಧಳನ್ನು ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಮದ್ವೆ ಆಗಿ ಎರಡು ಮಕ್ಕಳ ತಂದೆಯಾಗಿರುವ 37 ವರ್ಷದ ನರಸಿಂಹ ಅಪ್ರಾಪ್ತ ಬಾಲಕಿಯ ಜತೆ ಪ್ರೀತಿಯ ನಾಟಕವಾಡಿದ್ದ ಎಂದು ಪಾಲಕರು ಆರೋಪಿಸಿದ್ದಾರೆ. ವಿವಾಹಿತನೊಂದಿಗಿನ ಪ್ರೀತಿಗೆ ಬಾಲಕಿ ಮನೆಯವರು ವಿರೋಧಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 12ರಂದು ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮದಲ್ಲಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಪ್ರಾಪ್ತ ಬಾಲಕಿ ಮೃತಪಟ್ಟರೆ, ನರಸಿಂಹ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಹಿನ್ನೆಲೆ ಬಾಲಕಿ ಪೋಷಕರಿಂದ ಹಟ್ಟಿ ಪೋಲೀಸ್ ಠಾಣೆಯಲ್ಲಿ ನರಸಿಂಹ ಹಾಗೂ ಮಹಿಳಾ ಸಾಂತ್ವಾನ ಕೇಂದ್ರದ ಮೇಲ್ವಿಚಾರಕಿ ಅನುರಾಧ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮೇಲ್ವಿಚಾರಕಿ ಅರೆಸ್ಟ್ ಮಾಡಲಾಗಿದ್ದು, ನರಸಿಂಹ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.