LATEST NEWS
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿಯ 12 ವರ್ಷದ ಬಾಲಕ
ಉಡುಪಿ: ಸೋನಿ ಟಿವಿ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಉಡುಪಿಯ 12 ವರ್ಷದ ಬಾಲಕ 50 ಲಕ್ಷ ಹಣ ಗೆದ್ದಿದ್ದಾನೆ.
ಒಂದು ಕೋಟಿ ರೂ. ಮೊತ್ತದ 12ನೇ ಪ್ರಶ್ನೆಯಾದ ಮಹಾಭಾರತ ಯುದ್ಧದಲ್ಲಿ ಬದುಕುಳಿದು ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ಕರ್ಣನ ಪುತ್ರ ಯಾರೆನ್ನುವ ಪ್ರಶ್ನೆಗೆ ಇದ್ದ ಒಂದು ಲೈಫ್ ಲೈನ್ ಬಳಸಿ 50:50 ಅವಕಾಶ ಬಳಸಿದರೂ ಉತ್ತರ ಸಿಗದೆ ಕೊನೆಗೆ ಸ್ಪರ್ಧೆಯಿಂದ ಹಿಂದೆ ಸರಿದು 50 ಲಕ್ಷ ರೂ.ಮೊತ್ತಕ್ಕೆ ತೃಪ್ತಿಪಡಬೇಕಾಯಿತು.
ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ಏಳನೇ ತರಗತಿಯ ವಿಧ್ಯಾರ್ಥಿಯಾಗಿರುವ ಅನಾಮಯ ಯೋಗೀಶ್ ದಿವಾಕರ್ ಗೆ ದೇಶದ ಸ್ಮಾರ್ಟ್ ವಿದ್ಯಾರ್ಥಿಗಳಿಗೆ ಕೌನ್ ಬನೇಗಾ ಈ ಬಾರಿಯ ಆವೃತ್ತಿಯಲ್ಲಿ ಅವಕಾಶ ನೀಡಲಾಗಿತ್ತು. ಆಯ್ಕೆ ಹಂತದಲ್ಲಿ ಗೆದ್ದು ನಂತರ ಹಾಟ್ಸೀಟ್ಗೆ ಅನಾಮಯ ಲಗ್ಗೆ ಇಟ್ಟಿದ್
ಇದಕ್ಕೂ ಮುನ್ನ ನೀಡಿದ ಸ್ಮಾರ್ಟ್ ಉತ್ತರಗಳಿಗೆ ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಸಂಪೂರ್ಣವಾಗಿ ಫಿದಾ ಆಗಿದ್ದರು, ಅಲ್ಲದೇ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕೂಡ ಬಾಲಕನ ಸ್ಮಾರ್ಟ್ನೆಸ್ಗೆ ತಲೆ ಬಾಗಿದ್ದಾರೆ. ಅಲ್ಲದೆ ನೋಡಲು ಕ್ಯೂಟ್ ಆಗಿದ್ದ ಅನಮಯ ದಿಬಾಕರ್, ಪ್ರಶ್ನೆಗೆ ಉತ್ತರಿಸುವಲ್ಲಿಯು ಚೂಟಿಯಾಗಿದ್ದ.
ಒಂದು ಕೋಟಿಯ ಹಾಗೂ ಕೊನೆಯ ಪ್ರಶ್ನೆ ಇದಾಗಿತ್ತು.
ಪ್ರಶ್ನೆ: ಮಹಾಭಾರತ ಯುದ್ಧದಲ್ಲಿ ಬದುಕುಳಿದು ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ಕರ್ಣನ ಪುತ್ರ ಯಾರು?
A. ವೃಷಕೇತು
B. ಸತ್ಯಸೇನಾ
C. ವೃಷಸೇನಾ
D. ವೃಹಿಹಂತ
ಉತ್ತರ :A.ವೃಷಕೇತು
Facebook Comments
You may like
-
ಜೆರಾಕ್ಸ್ ಡಿಎಲ್ ನೀಡಿದ್ದಕ್ಕೆ ಯುವಕನ ಮೇಲೆ ಕೋಟ ಪೊಲೀಸರ ದರ್ಪ..ಯುವಕನ ತಾಯಿಯ ಮೇಲೂ ಕೈ ಮಾಡಿದ ಆರೋಪ….!!
-
ಜನವರಿ 30 ರಂದು ಬ್ರಹ್ಮಾವರ ತಾಲೂಕಿನ ನೆಂಚಾರು ಮತ್ತು ನಾಲ್ಕೂರಿನಲ್ಲಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ : ಸದಾಶಿವ ಪ್ರಭು
-
ಉಡುಪಿ ಗಣರಾಜ್ಯೋತ್ಸವ ಸಂಭ್ರಮಕ್ಕೆ ಮೂರು ವರ್ಷದ ಬಾಲೆಯಿಂದ ಮಿಷನ್ ಗನ್ ಭದ್ರತೆ
-
ಉತ್ತಮ ಆಡಳಿತ ಕೊಡುವ ಮನೋಭಾವನೆ ಇದ್ದರೆ ಖಾತೆ ಕ್ಯಾತೆ ಬರುವುದಿಲ್ಲ – ಸಚಿವ ಅಂಗಾರ
-
ಗೋಮಾಳದ ಭೂಮಿಯನ್ನು ಗೋಶಾಲೆಗಳಿಗೆ ನೀಡಲು ಕಂದಾಯ ಮಂತ್ರಿ ಅಸ್ತು
-
ದೊಡ್ಡಣಗುಡ್ಡೆ ರಹ್ಮಾನಿಯಾ ಮಸೀದಿಯಲ್ಲಿ ಉರೂಸ್ ಸಡಗರ
You must be logged in to post a comment Login