Connect with us

LATEST NEWS

ರೈಲಿನಲ್ಲಿ ಸೀಟ್ ಸಿಕ್ಕಿಲ್ಲ ಅಂತ ಸೀದಾ ರೈಲಿನ ಇಂಜಿನ್ ಕ್ಯಾಬಿನ್ ಗೆ ನುಗ್ಗಿದ ಪ್ರಯಾಣಿಕರು

ವಾರಣಾಸಿ ಫೆಬ್ರವರಿ 09: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಿಂದಾಗಿ ಉತ್ತರಪ್ರದೇಶದಲ್ಲಿರುವ ಪುಣ್ಯ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಪ್ರಯಾಗ್ ರಾಜ್ ಗೆ ತೆರಳುವ ಎಲ್ಲಾ ರೈಲುಗಳು ಇದೀಗ ತುಂಬಿ ತುಳುಕುತ್ತಿವೆ. ಈ ನಡುವೆ ರೈಲಿನಲ್ಲಿ ಸೀಟ್ ಸಿಗದ ಕಾರಣ ಪ್ರಯಾಣಿಕರು ರೈಲಿನ ಎಂಜಿನ್ ಕ್ಯಾಬಿನ್ ಗೆ ನುಗ್ಗಿದ ಘಟನೆ ವಾರಣಾಸಿಯಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.


ಮಾಧ್ಯಮಗಳ ವರದಿ ಪ್ರಕಾರ ಶನಿವಾರ ರಾತ್ರಿ 2 ಗಂಟೆಗೆ ಈ ಘಟನೆ ನಡೆಿದ್ದು, ವಾರಾಣಸಿಯಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಒಳಗೆ ಪ್ರಯಾಣಿಕರು ಪ್ರವೇಶ ಮಾಡಿದ್ದಾರೆ. ಜನದಟ್ಟಣೆ ಇದ್ದಿದ್ದರಿಂದ ತಮ್ಮ ಸೀಟುಗಳನ್ನು ಹುಡಕಲು ಪ್ರಯಾಣಿಕರಿಗೆ ಸಾಧ್ಯವಾಗಿಲ್ಲ. ಈ ವೇಳೆ ರೊಚ್ಚಿಗೆದ್ದ ಕೆಲ ಪ್ರಯಾಣಿಕರು ಎಂಜಿನ್ ಒಳಗೆ ಪ್ರವೇಶ ಮಾಡಿ ಗದ್ದಲ ಮಾಡಿದ್ದಾರೆ. ಕೊನೆಗೆ ಪೊಲೀಸರು ಬಂದು ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿದ ಮೇಲೆ, ಕೆಲವರನ್ನು ಅವರವರ ಸೀಟುಗಳಿಗೆ ಕಳುಹಿಸಿ ಕೊಟ್ಟ ಮೇಲೆ ರೈಲು ಹೊರಟಿದೆ.
ಈ ಕುರಿತ ವಿಡಿಯೊ ಗಮನ ಸಳೆದಿದೆ. ಈ ಕುರಿತು ನವಭಾರತ್ ಟೈಮ್ಸ್ ವರದಿ ಮಾಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *