LATEST NEWS
ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಮಂಗಳೂರು ಫೆಬ್ರವರಿ 09: ಕಪ್ಪೆ ಚಿಪ್ಪು ಹೆಕ್ಕಲು ನದಿಗಿಳಿದಿದ್ದ ವ್ಯಕ್ತಿಯೊಬ್ಬರು ನದಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಉಳ್ಳಾಲ ತಾಲೂಕಿನ ಹರೇಕಳ ಬೈತಾರ್ ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಬೈತಾರ್ ನಿವಾಸಿ ವಿನೋದ್ ಗಟ್ಟಿ (40) ಸಾವನಪ್ಪಿರುವ ದುರ್ದೈವಿ. ವಿನೋದ್ ಅವರು ಇಂದು ಬೆಳಗ್ಗೆ ಮನೆಯಿಂದ ಪಂಪ್ ವೆಲ್ ಕಡೆಗೆ ಕೆಲಸಕ್ಕೆಂದು ತೆರಳಿದ್ದು ಮಧ್ಯಾಹ್ನ ವೇಳೆ ಕೆಲಸದಿಂದ ವಾಪಸ್ ಬಂದಿದ್ದಾರೆ. ಬಳಿಕ ಮನೆಯ ಬಳಿಯ ನದಿಗೆ ಕಪ್ಪೆ ಚಿಪ್ಪು ಹೆಕ್ಕಲು ಇಳಿದಿದ್ದಾರೆ. ಈ ಸಂದರ್ಭ ವಿನೋದ್ ಅವರ ಕಾಲು ನದಿಯ ಕೆಸರಿನಲ್ಲಿ ಹೂತು ಹೋಗಿದ್ದು ನೀರಿನಿಂದ ಮೇಲೆಳಲು ಸಾಧ್ಯವಾಗದೆ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರು ವಿವಾಹಿತರಾಗಿದ್ದು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
