DAKSHINA KANNADA
ಉಳ್ಳಾಲ : ತೊಕ್ಕೊಟ್ಟು ಶ್ರೀ ವಿಠೋಭ ರುಕ್ಮಾಯಿ ಮಂದಿರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಂಕಲ್ಪ ಸೇವೆ..!

ಉಳ್ಳಾಲ : ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಿ,ದೇಶ ಅಭಿವೃದ್ಧಿ ಪಥದತ್ತ ಸಾಗಲಿ ಎಂಬ ಸಂಕಲ್ಪ ಸೇವೆಯು ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೋಟ್ಟು ಅವರ ನೇತೃತ್ವದಲ್ಲಿ ಶನಿವಾರ ರಾತ್ರಿ ಶ್ರೀ ವಿಠೋಭ ರುಕ್ಮಾಯಿ ಮಂದಿರದಲ್ಲಿ ನಡೆಯಿತು.
ಬಿಜೆಪಿ ಮಂಗಳೂರು ಮಂಡಲದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡ ದಯಾನಂದ ತೊಕ್ಕೊಟ್ಟು ಅವರನ್ನು ಮಂದಿರದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷರಾದ ಉಮೇಶ್ ಬಿ ಎಂ ತೊಕ್ಕೋಟ್ಟು, ಗಣೇಶ್ ಸುವರ್ಣ ಉಳ್ಳಾಲ್ ಬೈಲ್, ಬಿಜೆಪಿ ಯುವಮೋರ್ಚಾ ಮಂಡಲ ಕಾರ್ಯದರ್ಶಿ ಶರಣ್ ಶೆಟ್ಟಿ ಎ ಶಿವಾಜಿನಗರ, ಕೃಷ್ಣನಗರ ಬೂತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಬಿ ನಾಯಕ್, ಜಿಲ್ಲಾ ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕರಾದ ಅಜಿತ್ ಉಳ್ಳಾಲ್, ಸಮಾಜ ಸೇವಕರಾದ ಹರೀಶ್ ಶೆಟ್ಟಿ ವಾಸುಕಿ ನಗರ, ಎಬಿಸಿ ಮಾಜಿ ಅಧ್ಯಕ್ಷರಾದ ಲಾಂಚು ಲಾಲ್, ಉಳ್ಳಾಲ ಮಹಾ ಶಕ್ತಿಕೇಂದ್ರ ಸಾಮಾಜಿಕ ಜಾಲತಾಣ ಮಾಜಿ ಸಂಚಾಲಕರಾದ ಅವಿನಾಶ್ ಶೆಟ್ಟಿ ಕೃಷ್ಣನಗರ, ವಿಎಚ್ ಪಿ ಪ್ರಮುಖರಾದ ರೋಹಿತ್ ತೊಕ್ಕೊಟ್ಟು, ಗಣೇಶ್ ನಗರ ಬೂತ್ ಅಧ್ಯಕ್ಷರಾದ ಲಿಖಿತ್ ಭಂಡಾರಿ, ರವಿರಾಜ್ ತೊಕ್ಕೋಟ್ಟು, ಶಿವರಾಮ್ ಅಮಿನ್ ಉಳ್ಳಾಲ್ ಬೈಲ್ ಹಾಗೂ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.