ಡಿಸೆಂಬರ್ 09: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಕೋಟೆಕಾರ್ ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರಿನಿಂದ ಆಸಿಡ್‌ ಸೋರಿಕೆಯಾದ ಘಟನೆ ನಡೆದಿದೆ.

ಉಳ್ಳಾಲ : ಡಿಸೆಂಬರ್ 09: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಕೋಟೆಕಾರ್ ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರಿನಿಂದ ಆಸಿಡ್‌ ಸೋರಿಕೆಯಾದ ಘಟನೆ ನಡೆದಿದೆ.


ಕಾರವಾರದಿಂದ ಕೊಚ್ಚಿಗೆ ಅಸಿಡ್ ಕೊಂಡೊಯ್ಯುವ ಟ್ಯಾಂಕರಿನಲ್ಲಿ ಹಠಾತ್ತನೆ ಈ ಸೋರಿಕೆ ಉಂಟಾಗಿದೆ. ಇದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರನ್ನು ನಿಲ್ಲಿಸಿದ್ದಾರೆ.

 

ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಅಪಾಯವಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸ್ಥಳದಲ್ಲಿ ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್ ಪಿಎಲ್ ತಂಡ ಮತ್ತು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Share Information