Connect with us

  LATEST NEWS

  ಉಳ್ಳಾಲದಲ್ಲೂ ಈದ್ ಮೆರವಣಿಗೆ ವೇಳೆ ಪುಂಡಾಟ: ಪುಂಡರಿಗೆ ಪೊಲೀಸ್ ನೋಟಿಸ್‌

  ಮಂಗಳೂರು ಅಕ್ಟೋಬರ್ 03 : ಶಿವಮೊಗ್ಗದ ದುರ್ಘಟನೆ ಬಳಿಕ ಇದೀಗ ಉಳ್ಳಾಲದಲ್ಲೂ ಈದ್ ಮಿಲಾದ್ ಮೆರವಣಿಗೆ ವೇಳೆ ಪುಂಡಾಟ ನಡೆಸಿರುವುದು ಬೆಳಕಿಗೆ ಬಂದಿದ್ದು, ಅಂತಹ ಯುವಕರಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.


  ಸೆಪ್ಟೆಂಬರ್ 28 ರಂದುಈದ್ ಮಿಲಾದ್ ಮೆರವಣಿಗೆ ವೇಳೆ ಯುವಕರನೇಕರು ಉಳ್ಳಾಲದ ಅಬ್ಬಕ್ಕ ಸರ್ಕಲ್ ಹತ್ತಿ ಹಸಿರು ಬಾವುಟ ಪ್ರದರ್ಶಿಸಿ ಪುಂಡಾಟ ನಡೆಸಿದ್ದರು.ಅಲ್ಲದೆ, ರಸ್ತೆ ಬಂದ್‌ ಮಾಡಿ ಬೈಕ್‌ಹಾರ್ನ್‌ ಅಬ್ಬರದೊಂದಿಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದರ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ಷೇಪಕ್ಕೆ ಎಡೆಯಾಗಿತ್ತು. ಕೂಡಲೆ ಎಚ್ಚೆತ್ತ ಉಳ್ಳಾಲ ಠಾಣಾಧಿಕಾರಿ, ಪುಂಡಾಟ ನಡೆಸಿದ ಯುವಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಮಂಜನಾಡಿ, ಮದಕ, ಬಂಟ್ವಾಳ, ಬೆಳ್ತಂಗಡಿ, ದೇರಳಕಟ್ಟೆ, ಕೊಣಾಜೆ ಹಾಗೂ ಉಳ್ಳಾಲ ಭಾಗದ ಯುವಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply