LATEST NEWS
ರಷ್ಯಾದ ಹಿರಿಯ ಸೇನಾಧಿಕಾರಿಯನ್ನು ಕೊಂದ ಉಕ್ರೇನ್…!!
ಉಕ್ರೇನ್ : ರಷ್ಯಾದ ಹಿರಿಯ ಸೇನಾಧಿಕಾರಿಯನ್ನು ಕೊಂದಿರುವುದಾಗಿ ಉಕ್ರೇನ್ ಸರಕಾರ ಮಾಹಿತಿ ನೀಡಿದೆ. ರಷ್ಯಾದ ಆಕ್ರಮಣ ಮುಂದುವರೆಯುತ್ತಿದ್ದಂತೆ ಉಕ್ರೇನ್ ಕೂಡ ಪ್ರಬಲ ಪ್ರತಿರೋಧ ಒಡ್ಡುತ್ತಿದೆ. ಉಕ್ರೇನ್ ನ ಆಕ್ರಮಣದಲ್ಲಿ ಹತ್ಯೆಗೀಡಾದ ರಷ್ಯಾದ ಎರಡನೇ ಕಮಾಂಡರ್ ಇವರಾಗಿದ್ದಾರೆ.
ರಷ್ಯಾದ ಸೇನೆಯ 41 ನೇ ಪಡೆಯ ಮೊದಲ ಉಪ ಕಮಾಂಡರ್ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಸೋಮವಾರ ಹತ್ಯೆಗೀಡಾಗಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯದ ಗುಪ್ತಚರ ಮುಖ್ಯ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸೇನೆಯ 41ನೇ ಪಡೆಯ ಉಪ ಕಮಾಂಡರ್ ಆಗಿದ್ದ ಆಂಡ್ರೆ ಸುಖೋವೆಟ್ಸ್ಕಿ ಅವರನ್ನು ಕೂಡ ಉಕ್ರೇನ್ ಪಡೆಗಳು ಫೆಬ್ರುವರಿ ತಿಂಗಳ ಕೊನೆಯಲ್ಲಿ ಹತ್ಯೆ ಮಾಡಿದ್ದವು ಎಂದು ಉಕ್ರೇನ್ ಹೇಳಿಕೊಂಡಿತ್ತು. ರಷ್ಯಾದ 11 ಸಾವಿರಕ್ಕೂ ಅಧಿಕ ಯೋಧರನ್ನು ಕೊಂದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.