Connect with us

    BELTHANGADI

    ಉಜಿರೆ – ಬಸ್ ಗೆ ಕಾಯುತ್ತಿದ್ದವರ ಮೇಲೆ ಹರಿದ ಲಾರಿ ಇಬ್ಬರು ಸ್ಥಳದಲ್ಲೇ ಸಾವು

    ಬೆಳ್ತಂಗಡಿ ಫೆಬ್ರವರಿ 04: ಬಸ್ ಗೆ ಕಾಯುತ್ತಿದ್ದ ಇಬ್ಬರ ಮೇಲೆ ಲಾರಿಯೊಂದು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಉಜಿರೆ ಸಮೀಪದ ಗಾಂಧಿ ನಗರ ಬಳಿ ನಡೆದಿದೆ.


    ಉಜಿರೆ ಸಮೀಪದ ಗಾಂಧಿ ನಗರ ತಿರುವು ಬಳಿ ಬಸ್ ಗಾಗಿ ಪುರುಷ ಹಾಗೂ ಮಹಿಳೆ ರಸ್ತೆ ಬದಿ ನಿಂತಿದ್ದ ವೇಳೆ ಉಜಿರೆ ಕಡೆಯಿಂದ ತಿರುವಿನಲ್ಲಿ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿ ಹೊಡೆದದ್ದಲ್ಲದೆ ವಿದ್ಯುತ್ ಕಂಬ ಸಮೀಪದ ಕಟ್ಟಡಕ್ಕೆ ಹಾನಿಯುಂಟಾಗಿದೆ.
    ಮೃತಪಟ್ಟ ಪುರುಷ ವ್ಯಕ್ತಿಯನ್ನು ಉಜಿರೆ ನಿವಾಸಿ ಕಿಟ್ಟು ಎನ್ನಲಾಗಿದ್ದು, ಉಳಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply