LATEST NEWS
ಉಡುಪಿ: ಲಸಿಕಾ ಕೇಂದ್ರದಲ್ಲಿ ಹೆಚ್ಚಾದ ಜನ ದಟ್ಟಣೆ, ಅಯ್ಯೋ ಅನ್ನುವಂತಿದೆ ಹಿರಿಯ ನಾಗರಿಕರ ಪಾಡು

ಉಡುಪಿ, ಮೇ11: ಉಡುಪಿಯಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಸೈಂಟ್ ಸಿಸಿಲೀಸ್ ಕೇಂದ್ರದಲ್ಲಿ ಲಸಿಕೆ ಆರಂಭಗೊಂಡಿದೆ. ಲಸಿಕಾ ಕೇಂದ್ರದಲ್ಲಿ ಜನ ದಟ್ಟಣೆ ಹೆಚ್ಚಾಗಿದ್ದು, ಬೆಳ್ಳಂಬೆಳಿಗ್ಗೆ ಆರು ಗಂಟೆಗೆ ಜನ ಬಂದು ಕ್ಯೂ ನಿಂತಿದ್ದು, ಲಸಿಕಾ ಕೇಂದ್ರಕ್ಕೆ ಬಂದ ಹಿರಿಯ ನಾಗರಿಕರ ಪಾಡು ಅಯ್ಯೋ ಪಾಪ ಅನ್ನುವಂತಿದೆ.
ಲಸಿಕಾ ಕೇಂದ್ರದಲ್ಲಿ ಕೋವ್ಯಾಕ್ಸೀನ್ ಇಲ್ಲ, ಕೋವಿಶೀಲ್ಡ್ ಮಾತ್ರ ಲಭ್ಯವಿದ್ದು. ಎರಡನೇ ಹಂತದ ಲಸಿಕೆ ಸಿಗೋದು ಯಾವಾಗ ಎಂದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಸೈಂಟ್ ಸಿಸಿಲೀಸ್ ಕೇಂದ್ರದಲ್ಲಿ ಜನ ಲಸಿಕೆಗಾಗಿ ಹೋರಾಟ ಮಾಡುವಂತಾಗಿದೆ. ಲಸಿಕೆಗೆ ಬಂದಿರುವ ಜನ ಜನಪ್ರತಿನಿಧಿಗಳ ಮೇಲೆ ಹರಿಹಾಯ್ದ ಘಟನೆ ನಡೆದಿದ್ದು, ಜನರನ್ನು ಸಮಾಧಾನ ಪಡಿಸಲು ಸ್ವಯಂ ಸೇವಕರ ಹರಸಾಹಸ ಪಡುವಂತಾಯಿತು.
