LATEST NEWS
ಉಡುಪಿ : ನನ್ನ ಸಾವಿಗೆ ನಾನೇ ಕಾರಣ, ಚೀಟಿ ಬರೆದಿಟ್ಟು ಮಹಿಳೆ ಕಾಣೆ..!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 31 ವರ್ಷದ ಮಹಿಳೆಯೋರ್ವಳು ನಾಪತ್ತೆಯಾಗಿದ್ದಾಳೆ. ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ನಾಪತ್ತೆಯಾದ ಮಹಿಳೆಯಾಗಿದ್ದಾಳೆ.

ನ. 30ರಿಂದ ಲಲಿತಾ ಅವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಲಲಿತಾ ಅವರು ನಾಪತ್ತೆಯಾದ ಬಳಿಕ ಮನೆಯಲ್ಲಿ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ ಹಾಳೆಯಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ.ಇಂತಿ ನಿಮ್ಮ ಚಿನ್ನು ಎಂದು ಬರೆದಿಟ್ಟ ಚೀಟಿ ಸಿಕ್ಕಿದೆ.ಇದರ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.
Continue Reading