LATEST NEWS
ಮಗಳೊಂದಿಗೆ ಮನೆಯಿಂದ ಪರಾರಿಯಾದ ಪರಶುರಾಮನ ಪತ್ನಿ..!

ಉಡುಪಿ : ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ತನ್ನ ಮಗಳೊಂದಿಗೆ ನಾಪತ್ತೆಯಾದ ಘಟನೆ ಭಾನುವಾರ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.
ಬಾಗಲಕೋಟೆ ಮೂಲದ ಪ್ರಸ್ತುತ ಕಾಪುವಿನಲ್ಲಿರುವ ಪರಶುರಾಮ ಎಂಬವರ ಪತ್ನಿ ಅನ್ನಪೂರ್ಣ(35) ಅಪರ್ವಿ ಮತ್ತು 7ರ ಹರೆಯದ ಪುತ್ರಿ ರೇಣುಕ ನಾಪತ್ತೆಯಾದವರು.

ಅನ್ನಪೂರ್ಣ ಆವರು ಮಗಳೊಂದಿಗೆ ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದು ಸಂಜೆಯಾದರೂ ಬಾರದೆ ಇದ್ದುದರಿಂದ ವಿಚರಿತರಾದ ಮನೆಯವರು ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ.
ಬಳಿಕ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.