Connect with us

    LATEST NEWS

    ಅರ್ಧಶತಕ ಮುಗಿಸಲು ಬಿಡದೆ ಕ್ಯಾಚ್ ಹಿಡಿದಿದ್ದಕ್ಕೆ ಫೀಲ್ಡರ್ ಗೆ ಬ್ಯಾಟ್ ನಿಂದ ಹಲ್ಲೆ….!!

    ಗ್ವಾಲಿಯರ್ ಎಪ್ರಿಲ್ 5: 50 ಗಳಿಸಲು ಬಿಡಲಿಲ್ಲ ಎಂದು ಬ್ಯಾಟ್ಸ್ ಮನ್ ಒಬ್ಬ ಕ್ಯಾಚ್ ಹಿಡಿದ ಪಿಲ್ಡರ್ ಗೆ ಬ್ಯಾಟ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.


    ಗಾಯಗೊಂಡ ಆಟಗಾರನನ್ನು 23 ವರ್ಷದ ಸಚಿನ್ ಪರಶಾರ್ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಬ್ಯಾಟ್ಸ್ ಮನ್ ಅನ್ನು ಸಂಜಯ್ ಪಾಳಿಯಾ ಎಂದು ಗುರುತಿಸಲಾಗಿದ್ದು, ಆರೋಪಿ ಪರಾರಿಯಾಗಿದ್ದು, ಈತನನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ.


    ಶನಿವಾರ ಗೋಲಾ ಕಾ ಮಂದಿರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೇಲಾ ಗ್ರೌಂಡ್ ನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಸಂಜಯ್ ಪಾಳಿಯಾ 49 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದರು. ಈ ವೇಳೆ ಬೌಲರ್ ಎಸೆದ ಚೆಂಡನ್ನು ಸಿಕ್ಸರ್ ಭಾರಿಸಲು ಬಲವಾಗಿ ಭಾರಿಸಿದ್ದಾರೆ. ಆದರೆ ಚೆಂಡು ನೇರವಾಗಿ ಫೀಲ್ಡರ್ ಸಚಿನ್ ಪರಶಾರ್ ಕೈ ಸೇರಿದೆ. ಈ ವೇಳೆ ಅರ್ಧಶತಕ ಪೂರೈಸಲು ಬಿಡಲಿಲ್ಲ ಎಂದು ಕ್ರೋಧಗೊಂಡ ಸಂಜಯ್ ಏಕಾಏಕಿ ಸಚಿನ್ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿದ್ದ ಸಚಿನ್ ನನ್ನು ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಚಿನ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಹಲ್ಲೆ ನಡೆಸಿದ ಸಂಜಯ್ ಪಾಳಿಯಾ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply