LATEST NEWS
ಉಡುಪಿಯಲ್ಲಿ ಜಲಕ್ಷಾಮ – ಇನ್ನು ಐದು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ
ಉಡುಪಿ, ಜೂನ್ 8 : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವಿತರಣೆಗಾಗಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ರೇಷನಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಬಜೆ ಡ್ಯಾಂನಲ್ಲಿ ಕುಡಿಯುವ ನೀರಿನ ಶೇಖರಣೆ ತೀರಾ ಕಡಿಮೆ ಇರುವುದರಿಂದ ಪರ್ಕಳ, ಸೆಟ್ಟಿಬೆಟ್ಟು, ಅನಂತನಗರ, ಈಶ್ವರನಗರ, ವಿದ್ಯಾರತ್ನ ನಗರ, ಶೀಂಬ್ರ ಭಾಗಕ್ಕೆ ಜೂನ್ 8 ರ ಬದಲು ಜೂನ್ 9 ರಂದು ನಗರಸಭೆಯ ಕೊಳವೆಯ ಮೂಲಕ ನೀರಿನ ಪೂರೈಕೆ ಮಾಡಲಾಗುವುದು.
ನಂತರದಲ್ಲಿ 5 ದಿನಗಳಿಗೊಮ್ಮೆ ಅಂದರೆ, ಜೂನ್ 14 ರಂದು ಕಲ್ಮಾಡಿ, ಕೊಡವೂರು, ದೊಡ್ಡಣಗುಡ್ಡೆ, ಪುತ್ತೂರು ಟ್ಯಾಂಕ್ ನಿಂದ ಸಂತೆಕಟ್ಟೆ, ಸುಬ್ರಹ್ಮಣ್ಯ ನಗರ ಮತ್ತು ಕೊಡಂಕೂರು ವಾರ್ಡ್ಗಳಿಗೆ ಹಾಗೂ ಜೂನ್ 19 ರಂದು ಇಂದಿರಾನಗರ ಟ್ಯಾಂಕ್, ಅಜ್ಜರಕಾಡು, ಎಸ್.ಪಿ ಟ್ಯಾಂಕ್, ಪುತ್ತೂರು ಟ್ಯಾಂಕ್, ಗೋಪಾಲಪುರ, ಮೂಡುಬೆಟ್ಟು, ಹನುಮಂತನಗರ ಟ್ಯಾಂಕ್‌ನಿAದ ಹನುಮಂತನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು.
ಪ್ರಸ್ತುತ ಹೊಂಡಗಳಿಂದ ನೀರನ್ನು ಪಂಪಿಂಗ್ ಮೂಲಕ ಸರಬರಾಜು ಮಾಡಲಾಗುತ್ತಿರುವುದರಿಂದ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ನಗರಸಭೆಯ ನೀರನ್ನು ಉಪಯೋಗಿಸುತ್ತಿದ್ದಲ್ಲಿ, ನೀರನ್ನು ಕುದಿಸಿ ಕುಡಿಯುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You must be logged in to post a comment Login