LATEST NEWS
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ
ಉಡುಪಿ ಎಪ್ರಿಲ್ 18: ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲನೇ ಹಂತದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಇದುವರೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡ 12.3 ರಷ್ಟು ಮತದಾನವಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಬಿರುಸಿನ ಆರಂಭ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಬಿಸಿಲು ಜೋರಾಗಿರುವುದರಿಂದ ಬೆಳಿಗ್ಗೆಯಿಂದಲೇ ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, 15,13,287 ಒಟ್ಟು ಮತದಾರರು, ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1837 ಮತಗಟ್ಟೆಗಳಿದ್ದು, ಇಂದ ಮತದಾನಕ್ಕಾಗಿ 6930 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬಹುತೇಕ ಮತಗಟ್ಟೆಗಳಲ್ಲಿ ದೊಡ್ಡ ದೊಡ್ಡ ಸರತಿ ಸಾಲುಗಳು ಕಂಡು ಬಂದಿವೆ.
ಜಿಲ್ಲೆಯ ಗಣ್ಯರು ಈಗಾಗಲೇ ಮತದಾನ ಮಾಡಿದ್ದು, ಪೇಜಾವರ ಶ್ರೀ ಮತ್ತು ರಾಜ್ಯ ಸಭಾ ಸದಸ್ಯ ಉಡುಪಿಯ ವಿವೇಕಾನಂದ ಶಾಲೆಯಲ್ಲಿ ಪತ್ನಿ ಬ್ಲಾಸಂ ಜೊತೆ ಮತ ಚಲಾಯಿಸಿದರು.
ಶಾಸಕ ರಘುಪತಿ ಭಟ್ ನಿಟ್ಟೂರು ಶಾಲೆಯಲ್ಲಿ ಮತದಾನ ಮಾಡಿದರು.