Connect with us

LATEST NEWS

ಉಡುಪಿಯಲ್ಲಿ ವಿಟ್ಲಪಿಂಡಿಯ ಸಂಭ್ರಮ

ಉಡುಪಿ ಸೆಪ್ಟೆಂಬರ್ 14: ಶ್ರೀಕೃಷ್ಣನ ಜನ್ಮಾಷ್ಠಮಿಯ ಸಂಭ್ರಮದಷ್ಟೆ ಉಡುಪಿ ಮಠದಲ್ಲಿ ನಡೆಯುವ ಉತ್ಸವ ವಿಟ್ಲಪಿಂಡಿ. ಗೋಕುಲದಲ್ಲಿ ಕೃಷ್ಣನ ಜನನವಾಯಿತು ಎಂಬ ಸಂಭ್ರಮದಲ್ಲಿ ಗೊಲ್ಲರು ಸಹಸ್ರಾರು ವರ್ಷಗಳಿಂದ ಆಚರಿಸುತ್ತ ಬರುತ್ತಿರುವ ಸಂಭ್ರಮಾಚರಣೆ ಉಡುಪಿಯಲ್ಲಿ ವಿಟ್ಲಪಿಂಡಿಯಾಗಿ ಜನಪ್ರಿಯವಾಗಿದೆ. ಈ ಉತ್ಸವದಲ್ಲಿ ಶ್ರೀಕೃಷ್ಣನ ಬಾಲ್ಯ ಲೀಲೆನ್ನು ನೆನೆಯುವ ಹಲವಾರು ಘಟನೆಗಳು ವೇಷದಲ್ಲಿ ಕಂಗೊಳಿಸಿ ಜನತೆಯನ್ನು ಪುಳಕಿತಗೊಳಿಸುತ್ತಾ ಸಂಭ್ರಮಾಚರಣೆ ನಡೆಯುತ್ತದೆ.

ಏನಿದು ವಿಟ್ಲಪಿಂಡಿ ಉತ್ಸವ

ಶ್ರೀಕೃಷ್ಣನ ಬಾಲ್ಯ ಲೀಲೆಯನ್ನು ನೆನಪಿಸುವ ಉತ್ಸವ ಅಷ್ಟಮಿಯ ಮರುದಿನ ಆಚರಿಸಿ ಆಸ್ತಿಕ ಜನರು ಸಂಭ್ರಮಪಡುತ್ತಾರೆ. ಶ್ರೀಕೃಷ್ಣನ ಹಲವು ನಾಮಗಳಲ್ಲಿ ಒಂದಾದ ವಿಠಲ ಅಂತೆಯೆ ಕೃಷ್ಣನಿಗೆ ಪ್ರಿಯವಾದ ಗೋಸಂಕುಲವನ್ನು ವಿಠಲ ಎಂದು ಕರೆಯುತ್ತಾರೆ. ಇದು ಜನರ ಬಾಯಲ್ಲಿ ವಿಟ್ಲವಾಗಿ ಈ ಉತ್ಸವ ವಿಟ್ಲಪಿಂಡಿಯಾಗಿ ಜನಪ್ರಿಯವಾಗಿದೆ ಎಂದು ಹೇಳಲಾಗುತ್ತಿದೆ. ಕೃಷ್ಣನ ಬಾಲ್ಯ ಲೀಲೆಗಳನ್ನು ವಿಟ್ಲಪಿಂಡಿ ಉತ್ಸವದಲ್ಲಿ ಕಂಗೊಳಿಸಿ ಜನತೆ ಕೃಷ್ಣನ ಗುಣಗಾನ ಮಾಡುವ ಸದಾವಕಾಶ ಇದಾದ ಕಾರಣ ಜನರು ಈ ಸಂಭ್ರಮಾಚರಣೆ ಕೂಡಿಕೊಂಡು ಮಾಡುವುದು ವಿಶೇಷ.

ಈ ಹಿನ್ನೆಲೆಯಲ್ಲಿ ಪೊಡವಿಗೊಡೆಯ ಶ್ರೀಕೃಷ್ಣನ ಜನ್ಮಾಷ್ಠಮಿಯ ಸಂಭ್ರಮದ ಬಳಕ ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಬಹು ವಿಜೃಂಭಣೆಯಿಂದ ನಡೆಯಿತು. ಗೋಕುಲದಲ್ಲಿ ಶ್ರೀಕೃಷ್ಣನು ಜನಿಸಿದಾಗ ಸಂತಸಪಟ್ಟು ಜನತೆ ಆಚರಿಸುತ್ತಿರುವ ಸಂಭ್ರಮ ಉಡುಪಿಯಲ್ಲಿ ವಿಟ್ಲಪಿಂಡಿಯಾಗಿ ಜನಪ್ರಿಯವಾಗಿದೆ. ಸುಮಾರು 5000 ವರುಷಗಳಿಂದ ಇಂತಹ ಸಂಭ್ರಮಾಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತದೆ.

ಉಡುಪಿಯಲ್ಲಿ ಶ್ರೀ ಕೃಷ್ಣನ ಬಾಲಲೀಲೆಯ ಸ್ಮರಿಸಲು ವಿಟ್ಲಪಿಂಡಿ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ಅನಂತರ ಶ್ರೀ ಕೃಷ್ಣನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು. ಈ ವಿಟ್ಲಪಿಂಡಿಯ ಸಂಭ್ರಮೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕೃಷ್ಣನ ಬಾಲ್ಯ ಲೀಲೆಗಳನ್ನು ನೆನಪಿಸುವ ಹಲವು ವೇಷಗಳು ವಿಟ್ಲಪಿಂಡಿಯಲ್ಲಿ ಕಂಗೊಳಿಸಿತು. ಹುಲಿವೇಷ, ಗೊಲ್ಲರ ಸಂಭ್ರಮಾಚರಣೆ, ಆಸ್ತಿಕ ಭಕ್ತರ ಭಕ್ತಿಗಳ ಸಮ್ಮಿಲನವಾಗಿ ವಿಟ್ಲಪಿಂಡಿ ನಡೆಯುತ್ತದೆ.

ಕೃಷ್ಣನ ನೆಲೆ ವೀಡು ಕರೆಯಲ್ಪಡುವ ಉಡುಪಿಯಲ್ಲಿ ಕೃಷ್ಣನ ಜನ್ಮಾಷ್ಠಮಿಯಷ್ಟೆ ಸಂಭ್ರಮದಲ್ಲಿ ವಿಟ್ಲಪಿಂಡಿ ಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಸಹಸ್ರ ಸಂಖ್ಯೆಯಲ್ಲಿ ದೇಶ ವಿದೇಶಗಳಿಂದ ಭಕ್ತರು ಅಗಮಿಸಿ ಶ್ರೀ ಕೃಷ್ಣನ ಬಾಲ್ಯ ಲೀಲೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಭಗವಂತ ಭೂಮಿಗೆ ಬಂದಾಗ ಜನ ಸ್ವಾಗತಿಸಿ ಸಂಭ್ರಮಿಸುವ ಕ್ಷಣ ಈ ಅಷ್ಟಮಿ. ತಮ್ಮ ಕಷ್ಟ ಕಳೆಯಲು ಬರುವ ಭಗವಂತನನ್ನು ಸಂಭ್ರಮದಿಂದ ಬರಮಾಡಿಕೊಂಡರೆ ಸುಖ ಸಮೃದ್ಧಿ ಪ್ರಾಪ್ತಿ ಎಂಬುದು ಭಕ್ತರ ನಂಬಿಕೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *