Connect with us

    LATEST NEWS

    ಟ್ರೀ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕ್ರಮ- ಪ್ರಭಾಕರನ್

    ಟ್ರೀ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕ್ರಮ- ಪ್ರಭಾಕರನ್

    ಉಡುಪಿ, ಏಪ್ರಿಲ್ 7 : ಉಡುಪಿ ವಲಯದ ಬಡಗಬೆಟ್ಟುನಲ್ಲಿ ನಿರ್ಮಿಸಲಾಗಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರನ್ನು ಆಕರ್ಷಿಸುವಂತೆ ಸಸ್ಯೋದ್ಯಾನವನ್ನು ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.

    ಅವರು ಮಂಗಳವಾರ, ಟ್ರೀ ಪಾರ್ಕ್ ನಲ್ಲಿ ನಡೆದ, ಸಸ್ಯೋದ್ಯಾನದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಟ್ರೀ ಪಾರ್ಕ್ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್ ಪ್ರಾರಂಭಿಸುವಂತೆ ಸೂಚಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು, ಟ್ರೀ ಪಾರ್ಕ್ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಂದ ಸಂಗ್ರಹಿಸುವ ಪ್ರವೇಶ ಶುಲ್ಕವನ್ನು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಜಮೆ ಮಾಡುವಂತೆ ಮತ್ತು ಆ ಶುಲ್ಕವನ್ನು ಟ್ರೀ ಪಾರ್ಕ್ ನ ಅಭಿವೃದ್ದಿ ಕಾಮಗಾರಿಗೆ ಬಳಸಿಕೊಳ್ಳುವಂತೆ ತಿಳಿಸಿದರು.

    ಟ್ರೀ ಪಾರ್ಕ್ ನಲ್ಲಿನ ವಿವಿಧ ಜಾತಿಯ ಮರಗಳ ವೈವಿಧ್ಯತೆ ಕುರಿತು ಸದ್ರಿ ಮರದ ಬಳಿ ಮಾಹಿತಿ ಅಳವಡಿಸುವಂತೆ ಹಾಗೂ ಶಾಲಾ ಮಕ್ಕಳು ಟ್ರೀ ಪಾರ್ಕ್ ಗೆ ಭೇಟಿ ನೀಡಿ, ಅರಣ್ಯದ ಕುರಿತು ಮಾಹಿತಿ ಪಡೆಯಲು ಅನುಕೂಲವಾಗುವಂತೆ ವಿದ್ಯಾಂಗ ಇಲಾಖೆಯ ಉಪ ನಿರ್ದೇಶಕರ ಮೂಲಕ ಎಲ್ಲಾ ಶಾಲೆಗಳಿಗೆ ಮಾಹಿತಿ ಕಳಿಸಲು ಹಾಗೂ ಟ್ರೀ ಪಾರ್ಕ್ ನಲ್ಲಿ ಸಮಾರಂಭ ಏರ್ಪಡಿಸುವವರಿಂದ ನಿಗಧಿತ ಶುಲ್ಕ ಪಡೆಯುವಂತೆ ಹಾಗೂ ಟ್ರೀ ಪಾರ್ಕ್ ವೀಕ್ಷಣೆಗೆ ಬೆಳಗ್ಗೆ 10 ರಿಂದ ಸಂಜೆ 6.30 ರ ವರೆಗೆ ಸಮಯ ನಿಗಧಿಪಡಿಸುವಂತೆ ಪ್ರಭಾಕರನ್ ತಿಳಿಸಿದರು.

    ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವು ಜಿಲ್ಲೆಯ ಪ್ರಥಮ ಟ್ರೀ ಪಾರ್ಕ್ ಆಗಿದ್ದು, 3 ತಿಂಗಳ ಹಿಂದೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಿದ್ದು, ಪ್ರಸ್ತುತ ಟ್ರೀ ಪಾರ್ಕ್ ನ ಪ್ರವೇಶ ಶುಲ್ಕ ವಯಸ್ಕರಿಗೆ ರೂ.10 ಮತ್ತು ಮಕ್ಕಳಿಗೆ ರೂ.5 ಇದ್ದು, ಪ್ರತಿ ತಿಂಗಳು ರೂ.50,000 ದಷ್ಟು ಶುಲ್ಕ ಸಂಗ್ರಹವಾಗುತ್ತಿದ್ದು, ಇದುವರೆಗೆ ರೂ. 1,60,000.00 ಸಂಗ್ರಹವಾಗಿದೆ ಎಂದು ಟ್ರೀ ಪಾರ್ಕ್ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮಾಹಿತಿ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply